ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಅವರನ್ನು ಹೊಗಳಿ, ಪ್ರಧಾನಿ ಕಾಲೆಳೆದ ರಾಹುಲ್..!
ನ್ಯೂಸ್ ಕನ್ನಡ ವರದಿ: ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪ್ರಕಟವಾಗಿದ್ದು, ಭಾರತ ಮೂಲದ ಅಭಿಜಿತ್ ಬ್ಯಾನರ್ಜಿ ದಂಪತಿ ನೊಬೆಲ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈ ಸಂಬಂದ ಅಭಿಜಿತ್ ಬ್ಯಾನರ್ಜಿಗೆ AICC ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಅಭಿನಂದಿಸಿದ್ದು, ಪ್ರಧಾನಿ ಮೋದಿ ಅವರ ಕಾಲು ಎಳೆದಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಕಳೆದ ಚುನಾವಣೆ ವೇಳೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿದ್ದ NYAY (Nyuntam Aay Yojana) ಪರಿಕಲ್ಪನೆಗೆ ಅಭಿಜಿತ್ ಸಹಾಯ ಮಾಡಿದ್ದರು. NYAY, ಭಾರತದ ಬಡತನ ನಿರ್ಮೂಲನೆ ಹಾಗೂ ದೇಶದ ಆರ್ಥಿಕ ಸ್ಥಿತಿಯನ್ನು ಮೇಲೆತ್ತುವ ಯೋಜನೆಯಾಗಿತ್ತು. ಆದ್ರೀಗ, ಮೋದಿಯ ಆರ್ಥಿಕತೆ ದೇಶದ ಆರ್ಥಿಕ ಸ್ಥಿತಿಯನ್ನು ಹಾಳು ಮಾಡಿದ್ದು, ಬಡತನವನ್ನು ಹೆಚ್ಚಿಸಿದೆ’ ಅಂತಾ ಬರೆದುಕೊಂಡಿದ್ದಾರೆ.