ಅಭಿರಾಂ ಫ್ರೆಂಡ್ಸ್ ಕ್ರಿಕೆಟರ್ಸ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಜಂಟಿ ಸಹಭಾಗಿತ್ವದಲ್ಲಿ ರಕ್ತದಾನದೊಂದಿಗೆ ದೀಪಾವಳಿ ಸಂಭ್ರಮ

ನ್ಯೂಸ್ ಕನ್ನಡ ವರದಿ: ಅಭಿರಾಮ್ ಫ್ರೆಂಡ್ಸ್ ಕ್ರಿಕೆಟರ್ಸ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು(ರಿ) ವತಿಯಿಂದ ಬೃಹತ್ ರಕ್ತದಾನ ಶಿಬಿರವು ಅಕ್ಟೋಬರ್ 27 ರಂದು ಪುತ್ತೂರಿನ ಲಯನ್ಸ್ ಕ್ಲಬ್ ಸಭಾಭವನದಲ್ಲಿ ನಡೆಯಿತು.ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಜರುಗಿದ ವಿಶೇಷ ಶಿಬಿರದಲ್ಲಿ ಸ್ಥಳೀಯ ಹಿಂದೂ ಬಾಂಧವರೆಲ್ಲರೂ ರಕ್ತದಾನ ಮಾಡಿ ಮಾನವೀಯತೆ ಮೆರೆದರು.ಒಟ್ಟು 50 ಮಂದಿ ಎ ಎಫ್ ಸಿ ತಂಡದ ಸದಸ್ಯರು ರಕ್ತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಊರಿನಲ್ಲಿ ಹಬ್ಬ ಸಡಗರದ ಸಂಭ್ರಮದಲ್ಲಿರುವಾಗ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಅಭಿರಾಮ್ ಫ್ರೆಂಡ್ಸ್ ಕ್ರಿಕೆಟರ್ಸ್ ಪುತ್ತೂರು ಸದಸ್ಯರು  ವಿಶೇಷ ಕಾಳಜಿ ವಹಿಸಿ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಸಹಕರಿಸಿದರು. 

ಕಾರ್ಯಕ್ರಮದಲ್ಲಿ ಅಭಿರಾಮ್ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡದ ಶರತ್ ಕೇಪುಳು ,ತೇಜ ಕೆಮ್ಮಾಯಿ,ಅವಿನಾಶ್ ,ಅಜಿತ್ ,ವಿನೋದ್,ಅಭಿಷೇಕ್ ,ಅಕ್ಷಯ್,ಕಿಶೋರ್,ಸನತ್ ,ಇಜಾಝ್,ಭರತ್ ,ರಾಜೇಶ್ ,ಇಂದವೀರ್ ಭಟ್ ಹಾಗೂ ಶ್ರೇಯಸ್ ಭಟ್ ಕೆದಿಲಾಯ ಉಪಸ್ಥಿತರಿದ್ದರು.
ಮತ್ತು ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ ಕಾರ್ಯನಿರ್ವಾಹಕ ರಾದ ರಝಾಕ್ ಸಾಲ್ಮರ, ಇಮ್ರಾನ್ ಉಪ್ಪಿನಂಗಡಿ, ಶಾಹುಲ್ ಹಮೀದ್ ಕಾಶಿಪಟ್ನ, ಫಾರೂಕ್ ಜ್ಯೂಸ್ ರೋಮ್ಯಾಂಟಿಕ್, ಜಮಾಲ್ ಕಲ್ಲಡ್ಕ ಭಾಗವಹಿಸಿದ್ದರು ಕಾರ್ಯಕ್ರಮದ ಕೊನೆಯಲ್ಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ಸಂಸ್ಥೆಯ ವತಿಯಿಂದ ಎ ಎಫ್ ಸಿ ಪುತ್ತೂರು ತಂಡಕ್ಕೆ ದೀಪಾವಳಿಯ ವಿಶೇಷ ಉಡುಗೊರೆ ನೀಡಲಾಯಿತು.

Leave a Reply

Your email address will not be published. Required fields are marked *