ಚಿತ್ರರಂಗದಿಂದ ನಟ ಪ್ರಕಾಶ್ ರೈರನ್ನು ಬ್ಯಾನ್ ಮಾಡುವಂತೆ ಆಗ್ರಹ! ಇದರ ಕುರಿತು ಪ್ರಕಾಶ್ ರಾಜ್ ಹೇಳಿದ್ದೇನು ಗೊತ್ತೆ?

ನ್ಯೂಸ್ ಕನ್ನಡ ವರದಿ: ಖಳನಟ ಪ್ರಕಾಶ್ ರೈ ರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಅಖಿಲ ಭಾರತ ಹಿಂದೂ ಮಹಾಸಭಾ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು ಇದರ ಕುರಿತು ಪ್ರಕಾಶ್ ರಾಜ್ ಟ್ವೀಟ್ ಮಾಡವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಕಾಶ್ ರೈ ಹಿಂದೂ ದೇವರ ಹಾಗೂ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಅವರನ್ನು ಚಿತ್ರರಂಗದಿಂದ ದೂರವಿಡಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಾರ್ಯಕ್ರಮವೊಂದರಲ್ಲಿ ಪ್ರಕಾಶ್ ರೈ ರಾಮಾಯಣದಲ್ಲಿ ಬರುವ ರಾಮ-ಲೀಲಾ ಬಗ್ಗೆ ಮಾತನಾಡುತ್ತಾ, ಅದಕ್ಕೆ ಪೋರ್ನ್ ಸೈಟ್ ಬಗ್ಗೆ ಉದಾಹರಣೆ ನೀಡಿದ್ದು ಚರ್ಚೆಗೆ ಗ್ರಾಸವಾಗಿತ್ತು.

ಇದಕ್ಕೆ ಸ್ಪಷ್ಟೀಕರಣ ನೀಡಿದ ಪ್ರಕಾಶ್ ರಾಜ್ “ಧನ್ಯವಾದಗಳು ಡೆಸಿ ಪಾಲಿಟಿಕ್ಸ್. ನಾನು ಯಾವುದೇ ಧರ್ಮಕ್ಕೆ ವಿರೋಧಿಯಲ್ಲ. ನಾನು ಅದನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಇದ್ದೇನೆ. ಹೇ ಸುಳ್ಳುಗಾರರೆ… ನಾನು ಹಿಂದೂ ವಿರೋಧಿ ಎಂದು ನಕಲಿ ಸುದ್ದಿಗಳನ್ನು ಎಷ್ಟು ದಿನ ಹರಡುತ್ತೀರಿ .. ಎಷ್ಟು ಸಮಯದವರೆಗೆ ನೀವು ಜನರ ನಂಬಿಕೆ ಮತ್ತು ಅವರ ಸಂಸ್ಕೃತಿಯನ್ನು ದುರುಪಯೋಗಪಡಿಸಿಕೊಳ್ಳುತ್ತೀರಿ. ಬುಲ್ಶಿಟಿಂಗ್”. ಎಂದು ಟ್ವೀಟ್ ಮಾಡುವ ಮುಕಾಂತರ ಈ ಸಿನಿಮಾ ಬ್ಯಾನ್ ಮಾಡುವ ವಿಷಯಕ್ಕೆ ತೆರೆ ಎಳೆದಿದ್ದಾರೆ.

Leave a Reply

Your email address will not be published. Required fields are marked *