ಇವತ್ತು ತೀರ್ಪು ಪ್ರಕಟವಾಗುತ್ತೊ ಇಲ್ವೊ, ತ್ರಿಶಂಕು ಸ್ಥಿತಿಯಲ್ಲಿ ಅನರ್ಹ ಶಾಸಕರು..!

ನ್ಯೂಸ್ ಕನ್ನಡ ವರದಿ: ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬರುವುದು ವಿಳಂಬವಾಗುತ್ತಲೇ ಇದೆ. ನೆನ್ನೆ ತೀರ್ಪು ಬಂದೇ ಬರುತ್ತೆ ಎಂದು ನಂಬಿಕೊಂಡಿದ್ದ ಅನರ್ಹ ಶಾಸಕರಿಗೆ ನಿರಾಸೆಯಾಗಿದೆ. ನೆನ್ನೆ ತೀರ್ಪು ಬರುತ್ತಿಲ್ಲ. ಇವತ್ತು ತೀರ್ಪು ಪ್ರಕಟವಾಗುತ್ತದೋ ಇಲ್ಲವೋ ಖಾತ್ರಿ ಇಲ್ಲ.

ಡಿಸೆಂಬರ್ 5ರಂದು ಉಪಚುನಾವಣೆ ನಿಗದಿಯಾಗಿದೆ. ನ. 11ರಿಂದ ನೀತಿ ಸಂಹಿತೆ ಜಾರಿ ಬರುತ್ತದೆ. ಉಪಚುನಾವಣೆ ಸಮೀಪಿಸುತ್ತಿದೆ. ನೀತಿ ಸಂಹಿತೆಗೆ ನಾಲ್ಕೇ ದಿನ ಬಾಕಿ ಉಳಿದಿದೆ. ಒಂದು ವೇಳೆ ನ. 11ರೊಳಗೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗದಿದ್ದರೆ ಅನರ್ಹ ಶಾಸಕರಿಗೆ ತ್ರಿಶಂಕು ಸ್ವರ್ಗವೇ ಗತಿ.

Leave a Reply

Your email address will not be published. Required fields are marked *