ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಸಂಸ್ಥೆಯ ಯಶಸ್ವೀ ನೂರನೇ ರಕ್ತದಾನ ಶಿಬಿರ

ನ್ಯೂಸ್ ಕನ್ನಡ ವರದಿ: ಕುಂಬಳೆ,ಕಾಸರಗೋಡು ನವೆಂಬರ್ 28 : ಜನರಕ್ಷಾ ಕಾಸರಗೋಡು ಮತ್ತು ಕುಂಬಳೆ ಅಕಾಡೆಮಿ ಕಾಲೇಜು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸಂಸ್ಥೆಯ ನೂರನೇ ರಕ್ತದಾನ ಶಿಬಿರವು ಬ್ಲಡ್ ಡೋನೆಷನ್ ಎಕ್ಸ್ಪೊ ಹಾಗೂ ‘ಬದಲಾವಣೆ ನಮ್ಮಿಂದಲೇ’ ಎಂಬ ರಕ್ತದಾನದ ಮಹತ್ವ ಸಾರುವ ಕಿರು ಚಿತ್ರ ಪ್ರದರ್ಶನದೊಂದಿಗೆ ದಿನಾಂಕ 28 ನವೆಂಬರ್ 2019ನೇ ಗುರುವಾರದಂದು ಕುಂಬಳೆಯ ಅಕಾಡೆಮಿ ಕಾಲೇಜು ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.

ಜನರಕ್ಷಾ ಕಾಸರಗೋಡು ಇದರ ಚೇರ್ಮನ್ ನಾಸರ್ ಬಾಯಾರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಕುಂಬಳೆ ಅಕಾಡೆಮಿ ಕಾಲೇಜು ಇದರ ಮ್ಯಾನೆಜಿಂಗ್ ಡೈರೆಕ್ಟರ್ ಕಲೀಲ್ ಉದ್ಘಾಟಿಸಿದರು.

ವೇದಿಕೆಯಲ್ಲಿ ಮುನೀರ್ ಮಾಸ್ಟರ್,ರಝಾಕ್ ಮಾಸ್ಟರ್,ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯ ಕಾರ್ಯನಿರ್ವಾಹಕರಾದ ನಾಸೀರ್ ಆರ್.ಬಿ,ಮೆಹತಾಬ್ ಎಂ.ಕೆ,ಇಮ್ರಾನ್ ಅಡ್ಡೂರು,ಮೊಯ್ದಿನ್,ಮುಹಮ್ಮದ್ ಜನರಕ್ಷಾ,ಅಶ್ರಫ್ ಜನರಕ್ಷಾ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಇದರ ನಿರ್ವಾಹಕರು ಉಪಸ್ಥಿತರಿದ್ದರು.

ಯಶಸ್ವಿಯಾಗಿ ನಡೆದ ನೂರನೇ ರಕ್ತದಾನ ಶಿಬಿರದಲ್ಲಿ ಒಟ್ಟು 118 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮಂಗಳೂರು ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ 7 ಪ್ರದರ್ಶನಗಳ ಮೂಲಕ ಕಿರುಚಿತ್ರ ಹಾಗೂ ಎಕ್ಸ್ಪೋ ವೀಕ್ಷಿಸಲಾಯಿತು.

ಅಶ್ರಫ್ ಅರಬಿ ಕಲ್ಲಡ್ಕ ಕಾರ್ಯಕ್ರಮ ನಿರೂಪಣೆಗೈದರು.

ರಕ್ತದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ, ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಹಾಗೂ ಕಾರ್ಯಕ್ರಮದ ಯಶಸ್ವಿಯಾಗಿ ಹಗಳಿರುಲು ದುಡಿದ ಎಲ್ಲಾ ಕಾರ್ಯಕರ್ತರಿಗೂ,ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಕೃತಜ್ಞತೆಯನ್ನು ತಿಳಿಸಿದ್ದಾರೆ.

ಪ್ರಕಟಣೆ:
ಮಾಧ್ಯಮ ವಿಭಾಗ:
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)

Leave a Reply

Your email address will not be published. Required fields are marked *