ಕೇಜ್ರಿವಾಲ್ ಈಗ ಹನುಮಾನ್ ಚಾಲೀಸ ಪಠಿಸ್ತಾ ಇದ್ದಾರೆ, ಮುಂದೆ ಒವೈಸಿಯೂ ಪಠಿಸುತ್ತಾನೆ: ಆದಿತ್ಯನಾಥ್
ನ್ಯೂಸ್ ಕನ್ನಡ ವರದಿ: (04.02.2020): ಅಧಃಪತನದಲ್ಲಿದ್ದ ದೆಹಲಿ ಸದ್ಯ ಅರವಿಂದ ಕೇಜ್ರಿವಾಲ್ ಆಡಳತದಲ್ಲಿ ಒಂದು ಹಂತವನ್ನು ತಲುಪಿ ಸುಸ್ಥಿತಿ ಹೊಂದಿದೆ. ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಅರವಿಂದ ಕೇಜ್ರಿವಾಲ್ ನಡೆಸಿದ್ದಾರೆ. ಆದರೆ ಸದ್ಯ ಚುನಾವಣೆಯ ಕಾವು ದೆಹಲಿಯಾದ್ಯಂತ ಮೇಳೈಸಿದ್ದು, ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿವೆ, ಇದೀಗ ಬಿಜೆಪಿ ಪಕ್ಷದ ಅಭ್ಯರ್ಥಿಯ ರವಾಗಿ ಪ್ರಚಾರ ಮಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ, ಕೇಜ್ರಿವಾಲ್ ಹಾಗೂ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯ ಕಿರಾರಿ ಪ್ರದೇಶದಲ್ಲಿ ನಡೆಸಿದ ಸಮಾವೇಶದಲ್ಲಿ ಪಾಲ್ಗೊಂಡ ಆದಿತ್ಯನಾಥ್, ಈಗಾಗಲೇ ಅರವಿಂದ ಕೇಜ್ರಿವಾಲ್ ಹನುಮಾನ್ ಚಾಲಿಸ ಪಠಿಸಲು ಪ್ರಾರಂಭ ಮಾಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಅಸದುದ್ದೀನ್ ಒವೈಸಿಯೂ ಕೂಡಾ ಹನುಮಾನ್ ಚಾಲೀಸ ಪಠಿಸುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.