ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ತುರ್ತು ಭೇಟಿ
ಮಂಗಳೂರು,ಮಾರ್ಚ್ 23 : ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ನಿರ್ವಾಹಕರ ತಂಡವು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀಮತಿ ಸಿಂಧು ಬಿ ರೂಪೇಶ್ ರವರನ್ನು ಜಿಲ್ಲಾಧಿಕಾರಿ ಕಛೇರಿಯಲ್ಲಿ ಭೇಟಿಯಾಗಿ ಕರ್ನಾಟಕ ಲಾಕ್ ಡೌನ್ ಸಂದರ್ಭದಲ್ಲಿ ರಕ್ತದಾನ ಮಾಡುವುದರ ಬಗ್ಗೆ ಚರ್ಚಿಸಿದರು.
ರಕ್ತದಾನ ಮಾಡುವ ದಾನಿಗಳು ನಿರ್ಭೀತಿಯಿಂದ ರಕ್ತದಾನ ಮಾಡ ಬಹುದು.ಅದಕ್ಕೆ ಯಾವುದೇ ತಡೆ ಇಲ್ಲ.ಇಲಾಖೆಯಿಂದ ಸಂಪೂರ್ಣವಾದ ಸಹಕಾರ ನೀಡುವುದಾಗಿ ಜಿಲ್ಲಾಧಿಕಾರಿಯು ಭರವಸೆ ನೀಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಕೊರೋನಾ ವೈರಸ್ ರೋಗ ಹರಡದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿಯಿರುವ ಕರಪತ್ರಗಳನ್ನು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯ ನಿರ್ವಾಹಕರಿಂದ ನಗರದ ವಿವಿದೆಡೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)ಸಂಸ್ಥೆಯ ನಿರ್ವಾಹಕರಾದ ಇಮ್ರಾನ್ ಅಡ್ಡೂರು,ಫೈರೋಝ್ ವಳಚ್ಚಿಲ್,ನಿಝಾಂ ಬದ್ರಿಯಾ ನಗರ,ಸಮೀರ್ ಸೀಕೊ ಹಾಗೂ ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುನ್ನ ಕಮರಡಿ ಹಾಗೂ ಪೋಲಿಸ್ ಸಿಬ್ಬಂದಿಗಳು ಸಹಕರಿಸಿದರು.