ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಗಳು ಅಕ್ಟೋಬರ್ 15ರವರೆಗೆ ಬಂದ್?ಸತ್ಯಾಂಶವೇನು?

ನ್ಯೂಸ್ ಕನ್ನಡ ವರದಿ: (25.04.2020): ಈಗಾಗಲೇ ಲಾಕ್ ಡೌನ್ ಕಾರಣದಿಂದ ಎಲ್ಲಾ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದೆ. ಈ ನಡುವೆ ಲಾಕ್ ಡೌನ್ ವಿಸ್ತರಣೆಯಾಗುವ ಕುರಿತಾದಂತೆ ಹಲವಾರು ಫೇಕ್ ಸುದ್ದಿಗಳು ಹೊರ ಬೀಳುತ್ತಿದೆ. ಈ ನಡುವೆ ಇದೀಗ ಸುದ್ದಿಯೊಂದು ಹರಿದಾಡುತ್ತಿದ್ದು, ಅಕ್ಟೋಬರ್ 15ರವರೆಗೆ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಗಳು ಹಾಗೂ ರೆಸಾರ್ಟ್‍ಗಳನ್ನು ಮುಚ್ಚಬೇಕು ಎಂದು ಕೇಂದ್ರ ಸರಕಾರ ಆದೇಶ ಹೊರಡಿಸಿದೆ ಎಂಬಂತೆ ಒಂದು ನೋಟೀಸ್ ಅನ್ನು ಸಾಮಾಜಿಕ ತಾಣದಾದ್ಯಂತ ಹರಡಲಾಗುತ್ತಿದೆ.

“ಕೊರೊನಾ ವೈರಸ್ ಸದ್ಯ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಆದ್ದರಿಂದ ಕೇಂದ್ರ ಪ್ರವಾಸೋದ್ಯಮ ಇಲಾಖೆಯು ಅಕ್ಟೋಬರ್ 15ರವರೆಗೆ ಎಲ್ಲಾ ಹೋಟೆಲ್, ರೆಸಾರ್ಟ್ ಗಳನ್ನು ಮುಚ್ಚಬೇಕು ಎಂದು ಆದೇಶ ಹೊರಡಿಸಿದೆ ಎಂಬ ಪತ್ರವು ವೈರಲಾಗುತ್ತಿದೆ. ಈ ಕುರಿತು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ಪ್ರೆಸ್ ಇನ್ಫರ್ಮೇಶನ್ ಬ್ಯೂರೋ, ಇಂಥ ಆದೇಶವು ಕೇಂದ್ರ ಸರಕಾರದಿಂದ ಬಂದಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದ್ದು, ಆದೇಶ ಪತ್ರ ಕೂಡಾ ನಕಲಿಯಾಗಿದೆ ಎಂದು ತಿಳಿದಿದ್ದಾರೆ.

Leave a Reply

Your email address will not be published. Required fields are marked *