ಕರ್ನಾಟಕದಲ್ಲಿ ಪತ್ರಕರ್ತನಿಗೂ ಕೊರೊನಾ ಸೋಂಕು: ಮಾಧ್ಯಮದವರು ಮಾಡುತ್ತಿರುವುದೇನು??

ಕರ್ನಾಟಕದಲ್ಲಿ ಕೆಲವು ದಿನಗಳಿಂದ ನಿಯಂತ್ರಣದಲ್ಲಿದ್ದ ಕೊರೊನಾ ವೈರಸ್ ಪೀಡಿತರ ಪ್ರಮಾಣ ಇದೀಗ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಕನ್ನಡದ ಮಾಧ್ಯಮಗಳು ತಮ್ಮ ಪ್ರತಿನಿಧಿಗಳನ್ನು ಅಲ್ಲಲ್ಲಿಗೆ ಕಳುಹಿಸಿಕೊಟ್ಟು ಅವರಿಂದ ವರದಿ ಮಾಡಿಸುತ್ತಿದ್ದರು. ಮಾತ್ರವಲ್ಲದೇ, ಮಾದ್ಯಮ ವರದಿಗಾರರು ಸ್ವತಃ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಅನ್ನುವ ವಿಚಾರ ಬೆಳಕಿಗೆ ಬಂದಿದೆ.

ಪತ್ರಕರ್ತನಿಗೆ ಕೊರೊನಾ ಸೋಂಕು ಹರಡಿರುವ ಕುರಿತಾದಂತೆ ವಿಚಾರಗಳು ಲಭ್ಯವಾದ ಕೂಡಲೇ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ. ಎಲ್ಲಾ ಉದ್ಯಮಗಳನ್ನು ಮುಚ್ಚುಗಡೆ ಮಾಡಿ ಜನರು ಸಹಕಾರ ನೀಡುತ್ತಿದ್ದರೂ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ಅವರ ಸುರಕ್ಷತೆಯ ಮತ್ತು ದೇಶದ ಸುರಕ್ಷತೆಯ ಕುರಿತು ಕಾಳಜಿ ವಹಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇನ್ನು ರಾಜ್ಯದಲ್ಲಿ 24 ಗಂಟೆಗಳಲ್ಲಿ ಒಟ್ಟು 15 ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 489ಕ್ಕೆ ಏರಿಕೆಯಾಗಿದೆ. ಸೋಂಕಿಗೊಳಗಾಗಿರುವ ಪತ್ರಕರ್ತ ಕರ್ತವ್ಯದ ಮೇರೆಗೆ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಇವರನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕಿನ ಲಕ್ಷಣಗಳು ಕಂಡುಬಂದಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *