ಸಂಘರ್ಷಕ್ಕೆ ಭಾರತವೇ ಹೊಣೆ, ಒಂದಿಂಚು ಭೂಮಿ ಬಿಟ್ಟುಕೊಡುವುದಿಲ್ಲ: ರಾಜ್ ನಾಥ್ ಭೇಟಿಯ ಬಳಿಕ ಚೀನಾ ಹೇಳಿಕೆ!

ನ್ಯೂಸ್ ಕನ್ನಡ ವರದಿ: (05.09.2020): ಲಡಾಖ್ ನಲ್ಲಿ ನಡೆಯುತ್ತಿರುವ ಗಡಿ ವಿವಾದ ಮತ್ತು ಸೇನಾ ಸಂಘರ್ಷಕ್ಕೆ ಭಾರತ ಮತ್ತು ಭಾರತೀಯ ಸೈನಿಕರೇ ಕಾರಣ. ಆದ್ದರೀಂದ ನಾವು ಯಾವುದೇ ಕಾರಣಕ್ಕೂ ನಮ್ಮ ಗಡಿ ಭಾಗದಲ್ಲಿರುವ ಭೂಮಿಯ ಒಂದಿಂಚನ್ನೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಏನೇ ಆದರೂ ಭಾರತೀಯ ಸೈನಿಕರೇ ಹೊಣೆ ಎಂದು ಚೀನಾ ಹೇಳಿಕೆ ನೀಡಿದೆ. ರಷ್ಯಾದಲ್ಲಿ ಚೀನಾ ಮತ್ತು ಭಾರತೀಯ ವಿದೇಶಾಂಗ ಸಚಿವರ ನಡುವಿನ ಭೇಟಿಯ ಬಳಿಕ ಚೀನಾ ಈ ಹೇಳಿಕೆಯನ್ನು ನೀಡಿದ ಎಂದು ತಿಳಿದು ಬಂದಿದೆ.

ನಮ್ಮ ಗಡಿಯ ಒಂದಿಂಚು ಭೂಮಿಯನ್ನೂ ನಾನು ಬಿಟ್ಟುಕೊಡುವುದಿಲ್ಲ. ಚೀನಾ ಸೇನೆ ತನ್ನ ಸರಹದ್ದು ರಕ್ಷಿಸಿಕೊಳ್ಳಲು ಸಮರ್ಥ ಮತ್ತು ಸಶಕ್ತವಾಗಿದೆ. ಅಂತೆಯೇ ಸಂಘರ್ಷ ಸ್ಥಗಿತಗೊಳಿಸಿ, ಗಡಿಯಲ್ಲಿ ಶಾಂತಿ ಸ್ಥಾಪಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಸಿದ್ಧರಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಶಾಂತಿ ಸ್ಥಾಪನೆಗೆ ಸಿದ್ಧರಿದ್ದು, ಉಭಯ ನಾಯಕರೂ ಪರಸ್ಪರ ಶಾಂತಿಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದು ಚೀನಾ ಸರ್ಕಾರ ತನ್ನ ಹೇಳಿಕೆಯಲ್ಲಿ ಹೇಳಿದೆ.

Leave a Reply

Your email address will not be published. Required fields are marked *