ಸಿನಿಮಾ ನಟರಿಗೆ ಡ್ರಗ್ಸ್ ಪೂರೈಕೆ: ಆಫ್ರಿಕಾ ಪ್ರಜೆಯ ಬಂಧನ!
ನ್ಯೂಸ್ ಕನ್ನಡ ವರದಿ: (05.09.2020): ಚಿತ್ರರಂಗದಲ್ಲಿ ಡ್ರಗ್ ಪೂರೈಕೆ, ಸಾಗಾಟ ಹಾಗೂ ಸೇವನೆಯ ಕುರಿತಾದಂತೆ ಇಂದ್ರಜಿತ್ ಲಂಕೇಶ್ ನೀಡಿದ್ದ ಹೇಳಿಕೆ ಪ್ರಕಾರ ಇದೀಗ ಹಲವು ಮಂದಿ ಬಂಧನದ ಭೀತಿಯನ್ನು ಎದುರಿಸುತ್ತಿದ್ದಾರೆ. ಈಗಾಗಲೇ ಕನ್ನಡದ ಖ್ಯಾತ ನಟಿಯರ ಹೆಸರು ಥಳುಕು ಹಾಕಿಕೊಂಡಿದ್ದು, ಡ್ರಗ್ ಕುರಿತಾದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಇದೀಗ ಸಿನಿ ತಾರೆಯರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಆಫ್ರಿಕಾದ ಪ್ರಜೆಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತಾದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಲೌ ಪೆಪ್ಪೆರ್ ಸಾಂಬಾ ಎಂಆಫ್ರಿಕನ್ ಪ್ರಜೆಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಈತ ಹಲವು ಮಂದಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈಗಾಗಲೇ ಬಂಧನಕ್ಕೊಳಗಾಗಿರುವ ರವಿಶಂಕರ್ ಹಾಗೂ ರಾಗಿಣಿ ವಿಚಾರಣೆಯ ಸಂದರ್ಭದಲ್ಲಿ ಈತನ ಪಾತ್ರದ ಕುರಿತು ತಿಳಿದು ಬಂದಿದೆ ಎಂದು ಪೊಲೀಸರು ಖಾಸಗಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.