ನಟಿ ಕಂಗನಾ ರಣಾವತ್ ಬಿಜೆಪಿ ಸೇರಿದರೆ ರಾಜ್ಯಸಭಾ ಟಿಕೆಟ್ ಸಿಗಬಹುದು: ಕೇಂದ್ರ ಸಚಿವರ ಹೇಳಿಕೆ

ನ್ಯೂಸ್ ಕನ್ನಡ ವರದಿ: ಸುಶಾಂತ್ ಅಸಹಜ ಸಾವಿನ ನಂತರ ಮಾಧ್ಯಮದಲ್ಲಿ ಹೆಚ್ಚು ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್ ಅವರನ್ನು ಮುಂಬಯಿಯಲ್ಲಿ ಭೇಟಿಯಾದ ಕೇಂದ್ರ ಸಚಿವ ರಾಮ್‌ದಾಸ್‌ ಅಠಾವಳೆ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಈ ಮಧ್ಯೆ ಕಂಗನಾ ಭೇಟಿ ಕುರಿತಂತೆ ಮಾತನಾಡಿರುವ ಕೇಂದ್ರ ಸಚಿವ ರಾಮ್‌ದಾಸ್‌ ಅಠಾವಳೆ ‘ಕಂಗನಾ ಅವರು ಬಿಜೆಪಿಗೆ ಸೇರಿದರೆ ರಾಜ್ಯ ಸಭಾ ಸೀಟ್ ದೊರಕಬಹುದು’ ಎಂದು ಅಭಿಪ್ರಾಯಟ್ಟಿದ್ದಾರೆ.

ನಮ್ಮ ಪಕ್ಷ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾಗೆ ಸೇರಿದರೆ ಅವರಿಗೆ ಹೆಚ್ಚು ಲಾಭವಾಗಲಿಕ್ಕಿಲ್ಲ. ಆದರೆ ಅವರು ಬಿಜೆಪಿಗೆ ಸೇರಿದರೆ ಹೆಚ್ಚು ಲಾಭವಾಗಬಹುದು. ರಾಜ್ಯಸಭೆಯ ಸೀಟು ಸಹ ಸಿಗಬಹುದು. ಅವರು ಬಿಜೆಪಿಗೆ ಸೇರುವುದಾದರೆ ಸ್ವಾಗತ ಎಂದು ರಾಮ್‌ದಾಸ್‌ ಅಠಾವಳೆ ಹೇಳಿದ್ದಾರೆ.

Leave a Reply

Your email address will not be published. Required fields are marked *