ಕೊರೋನ ನಂತರ ಡ್ರಗ್ಸ್ ವಿಷಯಕ್ಕೂ ಧರ್ಮವನ್ನು ಎಳೆದು ತಂದ ಸುವರ್ಣ ನ್ಯೂಸ್ !
ನ್ಯೂಸ್ ಕನ್ನಡ ವರದಿ: ಕೊರೋನ ಮಹಾಮಾರಿಯ ಪ್ರಾರಂಭದ ದಿನಗಳಲ್ಲಿ ಕೊರೋನ ಜಿಹಾದ್ ಎಂದು ತಬ್ಲೀಗ್ ಜಮಾತ್ ಅನ್ನು ಗುರಿಯಾಗಿಸಿ ತನ್ನ ಟೀಆರ್ಪಿ ಹೆಚ್ಚಿಸಿದ ಮಾಧ್ಯಮಗಳು ಇದೀಗ ಕರ್ನಾಟಕದ ಡ್ರಗ್ಸ್ ಮಾಫಿಯಾ ವಿಷಯದಲ್ಲೂ ಧರ್ಮವನ್ನು ಏಳೆತಂದು ತನ್ನ ಟೀಆರ್ಪಿ ಹುಚ್ಚನ್ನು ಮುಂದುವರೆಸಿದೆ.

ಟೀಆರ್ಪಿಗಾಗಿ ಯಾವ ನಿಕೃಷ್ಟ ಮಟ್ಟಕ್ಕೂ ಇಳಿಯಲು ತಯಾರಾಗಿರುವ ಈ ಚಾನೆಲ್ ಗಳಿಗೆ ಪ್ರತಿಯೊಂದು ವಿಷಯದಲ್ಲೂ ಧರ್ಮವನ್ನು ಲೇಪಿಸಿ ಕಪೋಕಲ್ಪಿತ ಸುದ್ದಿಯನ್ನು ಬಿತ್ತಿಸುವುದೆಂದರೆ ಬಲುಇಷ್ಟ. ಈಗಾಗಲೇ ಸುವರ್ಣ ನ್ಯೂಸ್ ಡ್ರಗ್ಸ್ ಮತ್ತು ಲವ್ ಜಿಹಾದ್ ಎಂದು ಅರಚಾಟ ನಡೆಸಲು ಪ್ರಾರಂಭಿಸಿದ್ದು, ಪೊಲೀಸರ ಆರೋಪ ಪಟ್ಟಿಯಲ್ಲಿ ಹೆಸರಿರುವ, ರಾಜಕೀಯ ನಾಯಕರ ಪುತ್ರರ ಬಗ್ಗೆ ಮಾತನಾಡದ, ತುಟಿಪಿಟಿಕ್ ಎನ್ನದ ಸುವರ್ಣ ನ್ಯೂಸ್ ಇದೀಗ ಸಂಜನಾ ಮುಸ್ಲಿಂ ಡಾಕ್ಟರ್ ಜೊತೆ ಮದುವೆ ಆಗಿದೆ ಎಂಬ ಲಿಂಕ್ ಜೊತೆ ‘ಲವ್ ಜಿಹಾದ್’ ಎಂಬ ಹೊಸ ನಾಟಕವನ್ನು ಶುರುಮಾಡಿದೆ.

ಟಿವಿ ಚಾನಲ್ ಕಚೇರಿಯಲ್ಲೇ ಕೂತು ಎಲ್ಲಾ ತನಿಖೆಯನ್ನು ಮುಗಿಸಿ ತಮ್ಮ ಅಜೆಂಡಕ್ಕೆ ತಕ್ಕಂತೆ ತೀರ್ಪು ನೀಡುತ್ತಾ ಟೀಆರ್ಪಿ ಬೇಟೆ ಆಡುತ್ತಿದೆ.