ಜಮೀರ್ ಅಹ್ಮದ್ ಅಲ್ಪಸಂಖ್ಯಾತ ಅನ್ನೋದು ಅವರ ರಕ್ಷಣೆಯ ಟ್ಯಾಗ್ ಅಲ್ಲ!: ಸಚಿವ ಸುಧಾಕರ್
ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಸುದ್ದಿಯಾಗಿರುವ ಡ್ರಗ್ಸ್ ಮಾಫಿಯಾ ತನಿಖೆಯ ಸಂದರ್ಭದಲ್ಲಿ ಶಾಸಕ ಜಮೀರ್ ಅಹ್ಮದ್ ಅವರು ಶ್ರೀಲಂಕಾದಲ್ಲಿ ಕ್ಯಾಸಿನೋ ಹೋಗಿರುವ ವಿಚಾರ ಇಟ್ಟುಕೊಂಡು ಮಾಧ್ಯಮಗಳು ನಡೆಸುತ್ತಿರುವ ಚರ್ಚೆಯ ನಡುವೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಸುಧಾಕರ್ ‘ಅಲ್ಪಸಂಖ್ಯಾತ ಅನ್ನೋದು ರಕ್ಷಣೆಯ ಟ್ಯಾಗ್ ಅಲ್ಲ’ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ಗೆ ಟಾಂಗ್ ನೀಡಿದ್ದಾರೆ.
ತಪ್ಪಿತಸ್ಥರು ಯಾರೇ ಜನಾಂಗದವರಿರಲಿ, ಭಾಷಿಕರಿರಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಬಡವ ಅಥವಾ ಶ್ರೀಮಂತರರಿಲಿ ಪಕ್ಷಾತೀತವಾಗಿ ಕ್ರಮಕೈಗೊಳ್ಳುತ್ತೇವೆ, ಅಲ್ಪಸಂಖ್ಯಾತ ಅನ್ನೋದು ಜಮೀರ್ ಖಾನ್ ಅವರಿಗೆ ಐಡಿನಾ ಅಂತ ಪ್ರಶ್ನೆ ಮಾಡಿದರು. ಜಾತಿಯ ಐಡಿ ಇಟ್ಟುಕೊಂಡು ರಕ್ಷಣೆ ಮಾಡಿಕೊಳ್ಳಬೇಕಾ? ಎಂದು ಪ್ರಶ್ನಿಸಿದರು.