ಪುತ್ತೂರು ಸೆಂಟ್ರಲ್ ಮಾರ್ಕೆಟ್ ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಭೇಟಿ
ನ್ಯೂಸ್ ಕನ್ನಡ ವರದಿ: ಪುತ್ತೂರು ಮುಖ್ಯ ರಸ್ತೆಯಲ್ಲಿರುವ ಒಂದೇ ಸೂರಿನಡಿ ಹಲವು ಸೇವೆಗಳು ಎಂಬಂತೆ ಹಣ್ಣು ಹಂಪಲುಗಳು , ತರಕಾರಿಗಳು, ಆಯುರ್ವೆದಿಕ್ ಉತ್ಪನ್ನಗಳು ಹಾಗೂ ವಿವಿಧ ದಿನಸಿ ಸಾಮಾಗ್ರಿಗಳನ್ನು ಒಳಗೊಂಡಂತೆ ವ್ಯವಹಾರ ನಡೆಸುತ್ತಾ , ಸಮಾಜ ಮುಖಿ ಕಾರ್ಯಗಳ ಮೂಲಕ ಈ ಕೊರೋನಾ ಸಂದರ್ಭದಲ್ಲಿ ಕೂಡ ಸೈನಿಕರ ಕುಟುಂಬಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಉಚಿತವಾಗಿ ತರಕಾರಿ ಹಣ್ಣು ಹಂಪಲುಗಳನ್ನು ವಿತರಿಸುತ್ತಾ ವಿಶೇಷವಾಗಿ ಸೇವೆ ಮಾಡುತ್ತಿರುವ ಪುತ್ತೂರಿನ ಸೆಂಟ್ರಲ್ ಮಾರ್ಕೆಟ್ ಮಳಿಗೆಗೆ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಸಲೀಂ ಅಹ್ಮದ್ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತರಾದ ಶ್ರೀ ನಾರಾಯಣ ಸ್ವಾಮಿ ಯವರು ಭೇಟಿ ನೀಡಿ ವ್ಯವಹಾರದ ಜೊತೆಗೆ ಸಮಾಜಮುಖಿ ಸೇವೆ ಮಾಡುತ್ತಿರುವ ಯುವಕರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ಸಲೀಂ ಅಹ್ಮದ್ ರವರು ಮಾತನಾಡಿ, ತಮ್ಮ ವ್ಯವಹಾರದ ಜೊತೆಗೆ ಸಮಾಜದ ಬಗ್ಗೆ ಕಾಳಜಿ ವಹಿಸಿಕೊಂಡು, ಕೊರೋನಾ ಸಂದರ್ಭದಲ್ಲಿ ಕೂಡ ಜನರಿಗಾಗಿ ಸೇವೆ ಮಾಡುತ್ತಿರುವ ತಮ್ಮ ವಿಶೇಷ ಕಾರ್ಯಕ್ರಮಗಳು , ಸೇವೆಗಳು ಮುಂದೆ ಸಾಗಲಿ , ಇಂತಹ ಸಮಾಜಮುಖಿ ಕೆಲಸಗಳಿಗೆ ನಮ್ಮ ಬೆಂಬಲ ಯಾವತ್ತೂ ಇದೆ ಹೇಳಿ ಶುಭ ಹಾರೈಸಿದರು..
ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತರಾದ ಶ್ರೀ ನಾರಾಯಣ ಸ್ವಾಮಿ ಯವರು ಕೂಡ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪುತ್ತೂರು ನಗರಸಭೆಯ 8 ಜನ ಕೊರೋನಾ ವಾರಿಯರ್ಸ್ ಗಳನ್ನು ಸನ್ಮಾನಿಸಲಾಯಿತು ಹಾಗೂ ನಗರಸಭೆಗೆ ಸೆಂಟ್ರಲ್ ಮಾರ್ಕೆಟ್ ವತಿಯಿಂದ ಸ್ಯಾನಿಟೈಸರ್ ವಿತರಣೆ ಮಾಡಲಾಯಿತು..
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ ಶಹೀದ್, ಕೆಪಿಸಿಸಿ ಯ ಬಲರಾಂ, ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಯು ಟಿ ತೌಸೀಫ್ , ಸಂಸ್ಥೆಯ ಲತೀಫ್ ದರ್ಬೆ, ಮುಸ್ತಫಾ, ಅಬ್ದುಲ್ ಖಾದರ್, ಉಮರ್, ಶಾಫಿ ಅಲ್- ಜಝೀರಾ, ಮುಸ್ತಫಾ ಬಾಯ್, ಶಿಹಾಬ್ ಸಜಿಪ, ನಿಝಾಂ ಸಜಿಪ, ಅಝೀಝ್ ಎಂ.ಕೆ ಮನ್ಸೂರ್ ಬಪ್ಪಳಿಗೆ ಉಪಸ್ಥಿತರಿದ್ದರು.
ನ್ಯಾಯವಾದಿ ನೂರುದ್ದೀನ್ ಸಾಲ್ಮರ ಅತಿಥಿಗಳನ್ನು ಸ್ವಾಗತಿಸಿ, ರಜಾಕ್ ಬಿ.ಎಚ್.ಬಪ್ಪಳಿಗೆ ನಿರೂಪಿಸಿ, ಸಲೀಂ ಬರೆಪ್ಪಾಡಿ ಯವರು ಧನ್ಯವಾದ ಸಲ್ಲಿಸಿದರು..