ಮಣ್ಣು ಲೇಪಿಸಿ, ಕೆಸರಲ್ಲಿ ಕೂತು ಶಂಖ ಊದಿದರೆ ಕೊರೋನ ಬರಲ್ಲ ಎಂದ ಸಂಸದನಿಗೆ ಕೊರೋನ ಧೃಡ!
ನ್ಯೂಸ್ ಕನ್ನಡ ವರದಿ: ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ನಡೆದ ಪರೀಕ್ಷೆಯಲ್ಲಿ ಕೊರೋನ ದೃಢಪಟ್ಟ 29 ಸಂಸದರಲ್ಲಿ ರಾಜಸ್ಥಾನದ ಬಿಜೆಪಿ ಸಂಸದ ಸುಖ್ ಬೀರ್ ಸಿಂಗ್ ರಿಗೆ ಕೊರೋನ ವೈರಸ್ ದೃಢಪಟ್ಟಿದೆ.

ವಿಶೇಷ ಏನಪ್ಪಾ ಅಂದರೆ, ಆಗಸ್ಟ್ ತಿಂಗಳಲ್ಲಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋದಲ್ಲಿ ಸುಖ್ ಬೀರ್ ಸಿಂಗ್, ಕೆಸರಿನಲ್ಲಿ ಕುಳಿತರೆ ಮತ್ತು ಶಂಖ ಊದಿದರೆ ಕೊರೋನ ಬರುವುದಿಲ್ಲ ಎಂದಿದ್ದರು. ಕೆಸರಿನಲ್ಲಿ ಕುಳಿತು, ಮಣ್ಣಿನ ಲೇಪ ಮಾಡಿಕೊಂಡು ಶಂಖ ಊದುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಕೊರೋನ ವೈರಸ್ ವಿರುದ್ಧ ಹೋರಾಡಲು ನೆರವಾಗುತ್ತದೆ ಎಂದವರು ಹೇಳಿದ್ದರು.

ಅಂದು ಆ ವೀಡಿಯೋ ವೈರಲ್ ಆಗಿತ್ತು, ಇದೀಗ ಅವರಿಗೆ ಕೊರೋನ ಧೃಡ ಪಟ್ಟ ಕಾರಣ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ ಈ ಬಿಜೆಪಿ ಸಂಸದ.