ಮಂಗಳೂರು: ಡ್ರಗ್ಸ್ ಸಹಿತ ‘ಡ್ಯಾನ್ಸ್ ಇಂಡಿಯಾ ಡಾನ್ಸ್’ ಖ್ಯಾತಿಯ ಕಿಶೋರ್ ಶೆಟ್ಟಿ ಬಂಧನ!

ನ್ಯೂಸ್ ಕನ್ನಡ ವರದಿ: ಮುಂಬೈನಿಂದ ಡ್ರಗ್ಸ್ ಖರೀದಿಸಿ ಮಂಗಳೂರಿನಲ್ಲಿ ಮರಾಟ ಮಾಡುತ್ತಿದ್ದ ಖಚಿತ ಮಾಹಿತಿಯನ್ನು ಆಧರಿಸಿ ಮಂಗಳೂರು ನಗರದ ಕದ್ರಿ ಪದವು ಪರಿಸರದಲ್ಲಿ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಶನಿವಾರ ಮುಂಜಾವ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಅಕೀಲ್ ನೌಶಿಲ್(28) ಹಾಗೂ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ(30) ಬಂಧಿತ ಆರೋಪಿಗಳು. ಇವರಿಂದ ಸುಮಾರು ಒಂದು ಲಕ್ಷ ರೂ. ಮೌಲ್ಯದ ಎಂಡಿಎಂಎ ವಶಪಡಿಸಿ, 2 ಮೊಬೈಲ್ ಫೋನ್, ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಮುಂಬೈನಿಂದ ಅಕ್ರಮವಾಗಿ ಮಾದಕ ವಸ್ತುಗಳನ್ನು ಖರೀದಿಸಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು ಎಂದು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಹೇಳಿದರು.

Leave a Reply

Your email address will not be published. Required fields are marked *