ಮತ್ತೊಮ್ಮೆ ತುಳುನಾಡ ದೈವ ಕೊರಗಜ್ಜ ದರ್ಶನ ಪಡೆದ ಸಚಿವ ಯುಟಿ ಖಾದರ್!

ನ್ಯೂಸ್ ಕನ್ನಡ ವರದಿ-(09.04.18): ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯುಟಿ ಖಾದರ್ ರವರು ದೈವಸ್ಥಾನ ಪ್ರವೇಶಿಸಿದ್ದಕ್ಕೆ ಆ ದೈವಸ್ಥಾನಕ್ಕೆ ಇನ್ನೊಮ್ಮೆ ಬ್ರಹ್ಮಕಲಶ ಮಾಡಿಸಬೇಕು. ಅವರಿಗೆ ದೈವದ ಬೂಳ್ಯ ನೀಡಿದಾತ ತಲೆಕೆಟ್ಟವ. ಗೋಮಾಂಸ ತಿನ್ನುವವರನ್ನು ಒಳಗೆ ಬಿಡಬಾರದು ಎಂದೆಲ್ಲಾ ಆರೆಸ್ಸೆಸ್ ಮುಖಂಡ ಪ್ರಭಾಕರ್ ಭಟ್ ಯುಟಿ ಖಾದರ್ ವಿರುದ್ಧ ಹರಿಹಾಯ್ದಿದ್ದರು. ಇದೀಗ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಯುಟಿ ಖಾದರ್ ಮತ್ತೊಮ್ಮೆ ಕೊರಗಜ್ಜ ದೈವದ ದರ್ಶನ ಪಡೆದಿದ್ದಾರೆ ಮಾತ್ರವಲ್ಲದೇ ವಿಶೇಷ ಪ್ರಾರ್ಥನೆಯನ್ನೂ ಸಲ್ಲಿಸಿದ್ದಾರೆ.

ಮಂಗಳೂರಿನ ಹೊರವಲಯದ ತೊಕ್ಕೊಟ್ಟಿನಲ್ಲಿರುವ ಕೊರಗಜ್ಜ ದೈವಸ್ಥಾನಕ್ಕೆ ಸಚಿವ ಯುಟಿ ಖಾದರ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಲ್ಲಿನ ಅರ್ಚಕರು, ಯಾರು ಸತ್ಯದ ದಾರಿಯಲ್ಲಿ ನಡೆಯುತ್ತಾರೆಯೋ ಅಂಥವರನ್ನು ಕೊರಗಜ್ಜ ಕೈಬಿಡುವುದಿಲ್ಲ ಎಂದು ಅಭಯ ನೀಡಿದ್ದಾರೆ. ಯಾಉ ಏನೇ ಹೇಳಿದರೂ, ಯಾವುದೇ ರೀತಿಯ ಬೆದರಿಕೆ ಹಾಕಿದರೂ, ತಾನು ಜಗ್ಗುವುದಿಲ್ಲ ಎಂದು ಈ ಮೂಲಕ ಯುಟಿ ಖಾದರ್ ಸಾಬೀತುಪಡಿಸಿದ್ದಾರೆ.

Leave a Reply

Your email address will not be published. Required fields are marked *