ಸೋಶಿಯಲ್ ಮೀಡಿಯಾ ಪವರ್: ಒಂದೇ ದಿನದಲ್ಲಿ ಹೀರೋ ಆದ 80ರ ವೃದ್ಧ!
ಸಾಮಾಜಿಕ ತಾಣಗಳು ಎಂದರೆ ಹಾಗೆಯೇ, ಒಂದೇ ದಿನದಲ್ಲಿ ಅದು ಪವಾಡಗಳನ್ನೇ ಸೃಷ್ಟಿಸಬಹುದು. ಏನೂ ಇಲ್ಲದ ವ್ಯಕ್ತಿಯನ್ನು ಹೀರೋ ಮಾಡಬಹುದು, ಎಲ್ಲಾ ಇದ್ದವನನ್ನು ಝೀರೋ ಮಾಡಲೂಬಹುದು. ಇದೀಗ ದೆಹಲಿಯ ಮಾಳವೀಯ ನಗರದಲ್ಲಿ ಘಟನೆಯೊಂದು ನಡೆದಿದ್ದು, ಕಷ್ಟಪಟ್ಟು ದುಡಿಯುತ್ತಿದ್ದ ವೃದ್ಧ ದಂಪತಿಗಳಿಗಾಗಿ ಇಡೀ ಸಾಮಾಜಿಕ ತಾಣವೇ ಒಗ್ಗೂಡಿ ಸಹಾಯ ಮಾಡಿದೆ.
ಯಾವುದೇ ವ್ಯಾಪಾರ ವಹಿವಾಟುಗಳಿಲ್ಲದೇ ಕಷ್ಟಪಡುತ್ತಿದ್ದ ಇಬ್ಬರು ಸ್ವಾವಲಂಬಿ ವೃದ್ಧರ ಕುರಿತು ಓರ್ವ ಯುವಕ ಮಾಡಿದ್ದ ವೀಡಿಯೋ ಇಷ್ಟೆಲ್ಲಾ ಚಮತ್ಕಾರಕ್ಕೆ ಸಾಕ್ಷಿಯಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವೀಡಿಯೋ ಲಿಂಕ್ ಅನ್ನು ಕ್ಲಿಕ್ ಮಾಡಿ ವೀಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ
