AIMDF(R) ಉಡುಪಿ ತಾಲೂಕು ಅಧ್ಯಕ್ಷರಾಗಿ ಹಮ್ಮದ್ ಇಬ್ರಾಹಿಂ ಸಾಹೇಬ್ ನೇಮಕ
ನ್ಯೂಸ್ ಕನ್ನಡ ವರದಿ: ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಮ್(ರಿ) ಇದರ ನೂತನ ತಾಲೂಕು ಅಧ್ಯಕ್ಷರಾಗಿ ಹಮ್ಮದ್ ಇಬ್ರಾಹಿಂ ಸಾಹೇಬ್ ಇವರನ್ನು ಸಂಸ್ಥಾಪಕ ಅಧ್ಯಕ್ಷರಾದ ಶಕೀಲ್ ಹಸನ್ ನೇಮಕ ಮಾಡಿದ್ದಾರೆ.

AIMDF ರಾಜ್ಯಾಧ್ಯಕ್ಷರಾದ ಜನಾಬ್ ನಾಸೀರ್ ಅಹಮದ್ ಚಿಕ್ಕಮಗಳೂರು ,ಉಡುಪಿ ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಬಾಲಾಜಿ ,ಜನಾಬ್ ಅಮ್ಜದ್ ಕಾರ್ಯಾಧ್ಯಕ್ಷರು, ಅಬೂಬಕ್ಕರ್ ಸಜಿಪ ರಾಜ್ಯ ಉಪಾಧ್ಯಕ್ಷರು ,ಖಾಸಿಂ ಪಟೇಲ್ ಜೇವರ್ಗಿ ಗುಲ್ಬರ್ಗ ,ಉಡುಪಿ ಜಿಲ್ಲಾ ಅಧ್ಯಕ್ಷರಾದ ಮೊಹಮ್ಮದ್ ಸಲ್ಮಾನ್ ,ಜಿಲ್ಲಾ ಉಪಾಧ್ಯಕ್ಷರಾದ ಅಬಿದ್ ಅಲಿ ಹಾಗೂ ಉಡುಪಿ ಜಿಲ್ಲಾ ವಕ್ಫ್ ಚೇರ್ಮನ್ ಕೆ .ಪಿ ಇಬ್ರಾಹಿಂ ಇವರೆಲ್ಲರ ಉಪಸ್ಥಿತಿಯಲ್ಲಿ ಹಮ್ಮದ್ ಅವರಿಗೆ ಪ್ರಮಾಣ ಪತ್ರ ನೀಡಲಾಯಿತು.