ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ಮೋದಿ ಓರ್ವ ‘ಉಕ್ಕಿನ ಮನುಷ್ಯ’ : ಯೋಗಿ ಆದಿತ್ಯನಾಥ್

ನ್ಯೂಸ್ ಕನ್ನಡ ವರದಿ(09-04-2018): ದೇಶವನ್ನು ತ್ವರಿತ ಗತಿಯಲ್ಲಿ ಅಭಿವೃದ್ಧಿಯೆಡೆಗೆ ಕೊಂಡೊಯ್ಯುತ್ತಿರುವ ಪ್ರಧಾನ ಮಂತ್ರಿ ಮೋದಿ ಓರ್ವ ಐರನ್ ಮ್ಯಾನ್ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಧಾನಿ ಮೋದಿಯವರ ಗುಣಗಾನ ಮಾಡಿದ್ದಾರೆ.

ಈ ಹಿಂದೆ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರು ಮಾಡಿದ ದೇಶದ ಅಭಿವೃದ್ಧಿ ಕಾರ್ಯಗಳಿಗಾಗಿ ಅವರನ್ನು ಉಕ್ಕಿನ ಮನುಷ್ಯ ಎಂದು ಜನರು ಕರೆಯುತ್ತಿದ್ದರು, ಈಗ ಮೋದಿಯವರ ಅಭಿವೃದ್ಧಿಯನ್ನು ನೋಡಿ ಅವರನ್ನು ಅದೇ ಹೆಸರಿನಿಂದ ಕರೆಯಬೇಕಾಗಿದೆ ಎಂದ ಯೋಗಿ ಆದಿತ್ಯನಾಥ್, ಮೋದಿಯವರ ನಾಯಕತ್ವವನ್ನು ಮಹಾತ್ಮ ಗಾಂಧಿ ಹಾಗೂ ಸರ್ದಾರ್ ಪಟೇಲ್ ಅವರ ನಾಯಕತ್ವಕ್ಕೆ ಹೋಲಿಸಿದರು.

ಗುಜರಾತಿನ ಮೆಹ್ಸಾನದಲ್ಲಿ ಸಾಧುಸಂತರ ಹಾಗೂ ಸನ್ಯಾಸಿಗಳ ಬೃಹತ್ ಸಮ್ಮೇಳನದಲ್ಲಿ ಮಾತನಾಡಿದ ಯೋಗಿ, ಭಾರತದ ಸ್ವಾಕಂತ್ರ್ಯದ ನಂತರ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಸೌರಾಷ್ಟ್ರಕ್ಕೆ ಭೇಟಿ ನೀಡಿ ಸೋಮನಾಥ ದೇವಾಲಯದ ನವೀಕರಣವನ್ನು ಮಾಡಿದರು. ಇದು ಗುಜಾರಾತ್ ಮಣ್ಣಿನ ಮಹಿಮೆ ಎಂದ ಯೋಗಿ ಆದಿತ್ಯನಾಥ್ ಮಹಾತ್ಮ ಗಾಂಧಿ ಹಾಗೂ ಸರ್ದಾರ್ ಪಟೇಲ್ ಜನಿಸಿದ ಈ ಭೂಮಿ ಪವಿತ್ರ ಭೂಮಿ ಎಂದರು.

Leave a Reply

Your email address will not be published. Required fields are marked *