ಡಿಕೆ ಶಿವಕುಮಾರ್ ಸ್ವಯಂಘೋಷಿತ ಬಂಡೆ, ಶಿಲೆ, ವಿಗ್ರಹ ಅಷ್ಟೇ!: ಆರ್ ಅಶೋಕ್ ವ್ಯಂಗ್ಯ

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಉಪಚುನಾವಣೆ ಕಾವು ಹೆಚ್ಚಾದಂತೆ ಪರಸ್ಪರ ಮಾತಿನ ವಾಗ್ದಾಳಿಗಳೂ ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತಿದೆ. ಬಿಜೆಪಿ ಕಾಂಗ್ರೆಸ್ ನಾಯಕರ ಹೊಸ ಹೊಸ ಹೇಳಿಕೆ ಸುದ್ದಿಯಾಗುತ್ತಿದೆ.

ಕಾಂಗ್ರೆಸ್​​​ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ನಡುವೆ ಒಳಜಗಳಗಳು ನಡೆಯುತ್ತಿವೆ. ಶಿರಾದಲ್ಲಿ ಡಿಕೆ ಶಿವಕುಮಾರ್​​ಗೆ ಜಯಚಂದ್ರ ಸೋಲಬೇಕು. ಆರ್​ ಆರ್​ ನಗರದಲ್ಲಿ ಸಿದ್ದರಾಮಯ್ಯನವರಿಗೆ ಕುಸುಮಾ ಸೋಲಬೇಕು. ಇದು ಅವರಿಬ್ಬರ ಒಳಜಗಳ. ಶಿರಾದಲ್ಲಿ ಯಾಕೆ ಜಯಚಂದ್ರಗೆ ಟಿಕೆಟ್ ನೀಡಿದ್ರಿ ಅಂತ ಸುರ್ಜೆವಾಲ ಗದರಿದರು ಎಂದು ಡಿಕೆ ಶಿವಕುಮಾರ್ ಸಿದ್ದರಾಮಯ್ಯನವರಿಗೆ ಮಾಧ್ಯಮದ ಮುಂದೆ ಕಿವಿಯಲ್ಲಿ ಕೇಳುವ ತರ ನಾಟಕ ಮಾಡಿದ್ದಾರೆ. ಈ ವಿಷಯ ಮಾಧ್ಯಮಕ್ಕೆ ವಿಷಯ ಗೊತ್ತು ಮಾಡುವುದೇ ಶಿವಕುಮಾರ್ ಉದ್ದೇಶ ಆಗಿತ್ತು. ಇದು ಡಿಕೆ ಶಿವಕುಮಾರ್ ನಾಟಕ ಎಂದು ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. 

ಕಾಂಗ್ರೆಸ್​ನಲ್ಲಿ ಡಿಕೆ ಶಿವಕುಮಾರ್ ಟೆಸ್ಟ್ ಡ್ರೈವ್​​ ಕಾರ್ ಇದ್ದಂತೆ. ಬೇಕಾದಾಗ ಪಕ್ಷ ಅವರನ್ನು ಬಳಸಿಕೊಳ್ಳುತ್ತೆ ಅಷ್ಟೇ. ಅವರು ಸ್ವಯಂಘೋಷಿತ ಬಂಡೆ, ಶಿಲೆ, ವಿಗ್ರಹ ಅಷ್ಟೇ ಎಂದು  ಡಿಕೆ ಶಿವಕುಮಾರ್ ಬಗ್ಗೆ  ಆರ್ ಅಶೋಕ್ ವ್ಯಂಗ್ಯ ಮಾಡಿದರು.

Leave a Reply

Your email address will not be published. Required fields are marked *