ಅ. 26,27 ಕ್ಕೆ ವಿಚಾರಣೆಗೆ ಹಾಜರಾಗಿ!: ಕಂಗನಾ ಸಹೋದರಿಯರಿಗೆ ಮುಂಬೈ ಪೊಲೀಸ್ ನೋಟಿಸ್

ನ್ಯೂಸ್ ಕನ್ನಡ ವರದಿ: ಇದೇ ಅಕ್ಟೋಬರ್ 26,27ರಂದು ಪೊಲೀಸ್​ ವಿಚಾರಣೆಗೆ ಹಾಜರಾಗುವಂತೆ ನಟಿ ಕಂಗನಾ ರನೌತ್​ ಮತ್ತು ಆಕೆಯ ಸಹೋದರಿ ರಂಗೋಲಿ ಚಾಂದೆಲ್​ ಅವರಿಗೆ ಸಮನ್ಸ್​ ಜಾರಿ ಮಾಡಲಾಗಿದೆ. ದೇಶದ್ರೋಹ ಪ್ರಕರಣದ ಅಡಿ ಈ ಸಮನ್ಸ್​ ಜಾರಿ ಮಾಡಲಾಗಿದೆ.

ವಿಜಯದಶಮಿ ಹಬ್ಬದ ದಿನವಾದ ಅ.26 ಮತ್ತು 27ರಂದು ಅವರು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಬಾಲಿವುಡ್​ ನಟಿ ಕಂಗನಾ ರನೌತ್​ ಹಾಗೂ ಆಕೆಯ ಸಹೋದರಿ ರಂಗೋಲಿ ಚಾಂದೆಲ್​ ತಮ್ಮ ಟ್ವೀಟ್​ಗಳ ಮೂಲಕ ಕೋಮು ದ್ವೇಷವನ್ನು ಹರಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ​ ದೂರಿನ ಕುರಿತು ದಾಖಲಾದ ಎಫ್​ಐಆರ್​ ಅಡಿ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು.

ನಟಿ ಕಂಗನಾ ಮತ್ತವರ ಸಹೋದರಿ ಟ್ವೀಟ್​ ಮೂಲಕ ಕೋಮುದ್ವೇಷ ಹರಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿ ನಿರ್ದೇಶಕ ಸಾಹಿಲ್​ ಆಸ್ರಫ್​ಆಲಿ ಸಯ್ಯದ್​ ಬಾಂದ್ರಾ ಮೆಟ್ರೋಪಾಲಿಟನ್​ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಈ ಕ್ರಮಕ್ಕೆ ಮುಂದಾಗಲಾಗಿದೆ. ಕಂಗನಾ ಸೋಹದರರಿಯರ ಮೇಲೆ ಐಪಿಸಿ ಸೆಕ್ಷನ್​ 153ಎ (ದ್ವೇಷವನ್ನು ಉತ್ತೇಜಿಸುವುದು), 295ಎ (ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ನಡೆಸುವ ದುರುದ್ದೇಶ ಪೂರಿತ ಕೃತ್ಯಗಳು), 124 ಎ (ದೇಶದ್ರೋಹ) ಅಡಿಯಲ್ಲಿ ಅವರು ಎಫ್​ಐಆರ್​ ದಾಖಲಾಗಿದೆ.

Leave a Reply

Your email address will not be published. Required fields are marked *