ಹತ್ರಾಸ್​ ಅತ್ಯಾಚಾರ ಪ್ರಕರಣ: ಅಕ್ಟೋಬರ್ 29ರಂದು ಯುಪಿ ಸಿಎಂ ಯೋಗಿ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ!

ನ್ಯೂಸ್ ಕನ್ನಡ ವರದಿ: ಕಳೆದ ತಿಂಗಳು ಉತ್ತರ ಪ್ರದೇಶದ ಹತ್ರಾಸ್‌ ಎಂಬಲ್ಲಿ 19 ವರ್ಷದ ದಲಿತ ಯುವತಿಯನ್ನು ಅದೇ ಊರಿನ ಮೇಲ್ಜಾತಿ ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದರು. ಕೊಲೆ ಮಾಡುವಾಗ ಆಕೆಯ ನಾಲಿಗೆಯನ್ನೂ ಸಹ ಕತ್ತರಿಸಿ ಅಮಾನವೀಯ ಮೆರೆದಿದ್ದರು. ಈ ವೇಳೆ ಹುಡುಗಿಯ ಬೆನ್ನಿನ ಮೂಲೆ ಸಹ ಸಂಪೂರ್ಣ ಮುರಿದುಹೋಗಿತ್ತು ಎಂಬ ವಿಚಾರ ಮರಣೋತ್ತರ ಪರೀಕ್ಷೆಯಿಂದ ಬಯಲಾಗಿತ್ತು. ಈ ರಾಕ್ಷಸೀಯ ಘಟನೆಯನ್ನು ಖಂಡಿಸಿ ಇಡೀ ದೇಶ ಒಕ್ಕೊರಲಿನಿಂದ ಧ್ವನಿ ಎತ್ತಿದೆ. ಅಲ್ಲದೆ, ಹೋರಾಟಗಳೂ ಸಹ ನಡೆದಿವೆ.

ಈ ನಡುವೆ ಅ.29 ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಒತ್ತಾಯಿಸಿ ವಿವಿಧ ಮಹಿಳಾ ಸಂಘಟನೆಗಳು ರಾಷ್ಟ್ರವ್ಯಾಪಿ ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ. ಅಖಿಲ ಭಾರತ ಪ್ರಜಾಸತ್ಮಾತ್ಮಕ ಮಹಿಳಾ ಸಂಘ, ರಾಷ್ಟ್ರೀಯ ಮಹಿಳಾ ಒಕ್ಕೂಟ, ಅಖಿಲ ಭಾರತ ಪ್ರಗತಿಶೀಲ ಮಹಿಳಾ ಸಂಘ, ಪ್ರಗತಿಶೀತ್ ಮಹಿಳಾ ಸಂಘಟನೆ ಮತ್ತು ಇತರ ಸಂಘ ಸಂಸ್ಥೆಗಳು, ಹೋರಾಟಗಾರರು ಸೇರಿ ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

Leave a Reply

Your email address will not be published. Required fields are marked *