ನಾವು ಅಧಿಕಾರಕ್ಕೆ ಬಂದರೆ ನಿತೀಶ್ ಕುಮಾರ್’ಗೆ ಜೈಲು: ಎಲ್’ಜೆಪಿ ನಾಯಕ ಚಿರಾಗ್ ಪಾಸ್ವಾನ್

ನ್ಯೂಸ್ ಕನ್ನಡ ವರದಿ: ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ತೀವ್ರ ರಾಜಕೀಯ ಬೆಳವಣಿಗೆ, ಭರ್ಜರಿ ಚುನಾವಣಾ ಪ್ರಚಾರ ನಡೆಯುತ್ತಿದ್ದು, ರಾಜಕೀಯ ನಾಯಕರ ಪರಸ್ಪರ ವಾಗ್ದಾಳಿ ಮುಂದುವರೆದಿದೆ.

​ ತಮ್ಮ ಎಲ್​ಜೆಪಿ ಪಕ್ಷ ಅಧಿಕಾರಕ್ಕೆ ಬಂದರೇ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಎಲ್​ಜೆಪಿ ನಾಯಕ ಚಿರಾಗ್​ ಪಾಸ್ವಾನ್​ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಇಲ್ಲಿನ ಬಕ್ಸಾರ್​ನ ಡುಮ್ರಾನ್​ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಪಾಸ್ವಾನ್, ಇದು ಚಿರಾಗ್​ ನೀಡುತ್ತಿರುವ ಭರವಸೆ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ನಾನು ಇದನ್ನು ಉಲ್ಲೇಖಿಸಿದ್ದೇನೆ. ನಮ್ಮ ಪಕ್ಷ ಎಲ್​ಜೆಪಿ ಅಧಿಕಾರಕ್ಕೆ ಬಂದರೆ, ‘7 ನಿಶ್ಚಯ್​’ ಯೋಜನೆಯಲ್ಲಿ ನಡೆದ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಲಾಗುವುದು. ಇದರಲ್ಲಿ ಯಾವುದೇ ಅಧಿಕಾರಿ ಅಥವಾ ಮುಖ್ಯಮಂತ್ರಿ ಭ್ರಷ್ಟಚಾರದಲ್ಲಿ ತೊಡಗಿದ್ದರೆ ಅವರನ್ನು ಜೈಲಿಗೆ ಕಳುಹಿಸಲಾಗುವುದು ಎಂದರು.

ಇದೇ ವೇಳೆ ಬಿಹಾರದಲ್ಲಿ ನಿತೀಶ್​ ಮುಕ್ತ ಸರ್ಕಾರಕ್ಕೆ ಚಿರಾಗ್​ ಕರೆ ನೀಡಿದ್ದಾರೆ. ಅಲ್ಲದೇ ಎಲ್​ಜೆಪಿ ಅಭ್ಯರ್ಥಿಗಳಿಲ್ಲದ ಕ್ಷೇತ್ರದಲ್ಲಿ ಮಾಜಿ ಮೈತ್ರಿ ಪಕ್ಷವಾದ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದ್ದಾರೆ.ಸೀಟು ಹಂಚಿಕೆಯಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಪಾಸ್ವಾನ್​ ಎನ್​ಡಿಎ ಮೈತ್ರಿಕೂಟದಿಂದ ಹೊರನಡೆದಿದ್ದರು. ಆದರೆ, ನಾನು ಮೋದಿ ನಿಷ್ಠಾವಂತ. ನಾನು ಅವರ ಹನುಮ. ನನ್ನ ಹೃದಯದಲ್ಲಿರುವುದು ಪ್ರಧಾನಿ ಎನ್ನುವ ಮೂಲಕ ಬಿಜೆಪಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದಾರೆ.

Leave a Reply

Your email address will not be published. Required fields are marked *