1984ರ ಚುನಾವಣೆಯಲ್ಲಿ ಆರೆಸ್ಸೆಸ್ ಸಹಾಯ ಯಾಚಿಸಿದ್ದರಂತೆ ರಾಜೀವ್ ಗಾಂಧಿ: ಸ್ಫೋಟಕ ಮಾಹಿತಿ ಬಯಲು!
ನ್ಯೂಸ್ ಕನ್ನಡ ವರದಿ(09-04-2018): 1984ರ ಲೋಕಸಭಾ ಚುನಾವಣೆಯಲ್ಲಿ ದಿವಂಗತ ರಾಜೀವ್ ಗಾಂಧಿಯವರು ಆರೆಸ್ಸೆಸ್ ಸಹಾಯವನ್ನು ಯಾಚಿಸಿದ್ದರು ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ರಷೀದ್ ಕಿದ್ವಾಯಿಯವರ ‘24 ಅಕ್ಬರ್ ರೋಡ್; ಎ ಶಾರ್ಟ್ ಹಿಸ್ಟರಿ ಆಪ್ ದಿ ಪಿಪಲ್ ಬಿಹೆಂಡ್ ದಿ ಫಾಲ್ ಅಂಡ್ ದಿ ರೈಸ್ ಆಫ್ ದಿ ಕಾಂಗ್ರೆಸ್ ‘ ಪುಸ್ತಕದಲ್ಲಿ ಈ ರಹಸ್ಯವನ್ನು ಬಹಿರಂಗಗೊಳಿಸಿದ್ದಾರೆ.
1984ರ ಚುನಾವಣೆ ರಾಜೀವ್ ಗಾಂಧಿಯವರಿಗೆ ಬಹುದೊಡ್ಡ ತಲೆನೋವಾಗಿತ್ತು. ಸಿಖ್ಖರು ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ನಡೆಸುತ್ತಿದ್ದರು. ಆ ಸಮಯದಲ್ಲಿ ಅಕ್ರಮಣಕಾರಿ ಸ್ವಭಾವದವರಾದ ರಾಜೀವ್ ಗಾಂಧಿ, ಹಿಂದೂಗಳ ಅಭದ್ರತೆಯ ಲಾಭವನ್ನು ಬಳಸಿಕೊಳ್ಳುವ ಮೂಲಕ ಅಧಿಕಾರವನ್ನು ಪಡೆಯಲು ಯತ್ನಿಸಿದರು. ತನ್ನ ತಾಯಿ ಸಾವಿನ ಅನುಕಂಪ ಮತ್ತು ಹಿಂದೂತ್ವವನ್ನು ರಾಜಕೀಯದಲ್ಲಿ ಬಳಸಿಕೊಳ್ಳುವ ಉದ್ದೇಶದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಾಳಾಸಾಹೇಬ್ ದಯೋರಾ ಅವರನ್ನು ರಾಜೀವ್ ಗಾಂಧಿ ಭೇಟಿಯಾಗಿದ್ದರು. ಈ ಕುರಿತು ರಾಜೀವ್ ಹಾಗೂ ಬಾಳಾ ಸಾಹೇಬ್ ಗುಪ್ತ ಮಾತುಕತೆ ನಡೆಸಿದರು ಎಂದು ಪುಸ್ತಕದಲ್ಲಿ ಬರೆಯಲಾಗಿದೆ.
ಆರೆಸ್ಸೆಸ್ ಸಹಯದಿಂದ ಕಾಂಗ್ರೆಸ್ ಪಕ್ಷವು 84 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತು. ಇದನ್ನು ಕಾಂಗ್ರೆಸಿನ ಮಾಜಿ ಸಂಸದರೂ ಕೂಡ ಒಪ್ಪಿಕೊಂಡಿದ್ದಾರೆ. ಮಾಜಿ ಕಾಂಗ್ರೆಸ್ ನಾಯಕ ಬನ್ವರಿಯಲ್ ಪುರೋಹಿತ್ ರಾಜೀವ್ ಗಾಂಧಿ ಮತ್ತು ಬಾಳಾ ಸಾಹೇವ್ ನಡುವೆ ಮಧ್ಯವರ್ತಿಯಾಗಿದ್ದರು ಎಂಬುದನ್ನು ಪುಸ್ತಕದಲ್ಲಿ ಅವರು ತಿಳಿಸಿದ್ದಾರೆ.