ಮುಂಬೈ: ರಿಪಬ್ಲಿಕ್ ಟಿವಿ ಮಾಲಕ, ಸಂಪಾದಕ ಅರ್ನಾಬ್ ಗೋಸ್ವಾಮಿ ಬಂಧನ

ನ್ಯೂಸ್ ಕನ್ನಡ ವರದಿ: ಒಂದು ಅನಿರೀಕ್ಷಿತ ಬೆಳವಣಿಗೆಯಲ್ಲಿ ಇಂದು ಬೆಳಿಗ್ಗೆ ರಿಪಬ್ಲಿಕ್ ಚಾನೆಲ್ ಮಾಲಕ ಮತ್ತು ಸಂಪಾದಕ ಅರ್ನಾಬ್ ಗೋಸ್ವಾಮಿಯನ್ನು ರಾಯಗಢ್ ಪೊಲೀಸರು ಬಂಧಿಸಿದ್ದಾರೆ.

2018 ರ ಆತ್ಮಹತ್ಯೆಯ ಪ್ರಕರಣವೊಂದಕ್ಕೆ ಸಂಧಪಟ್ಟು ಇಂಟೀರಿಯರ್ ಡಿಸೈನರ್ ಒಬ್ಬರ ಆತ್ಮಹತ್ಯೆ ಪ್ರಕರಣವನ್ನು ಮುಂಬೈ ಪೊಲೀಸರು ಮರು ತನಿಖೆ ಪ್ರಾರಂಭಿಸಿದ್ದರು, ಇದೀಗ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಕೌಂಟರ್ ಸ್ಪೆಷಲಿಸ್ಟ್ ಪೊಲೀಸ್ ಅಧಿಕಾರಿ ಸಚಿನ್ ವಾಝೆ ನೇತೃತ್ವದ ರಾಯಗಢ್ ಪೊಲೀಸರು ಅರ್ನಬ್ ಗೋಸ್ವಾಮಿಯ ಮುಂಬೈ ನಿವಾಸಕ್ಕೆ ಬಂದು ಬಂಧಿಸಿ ರಾಯಗಢ್ ಠಾಣೆಗೆ ಕರೆದೊಯ್ಯುತ್ತಿದ್ದಾರೆ.

Leave a Reply

Your email address will not be published. Required fields are marked *