ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ರಾಹುಲ್ ಸೋಲು ಖಚಿತ: ರಾಹುಲ್ ಗೆ ಬಿಜೆಪಿ ತಿರುಗೇಟು!
ನ್ಯೂಸ್ ಕನ್ನಡ ವರದಿ(09-04-2018): 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಾರಣಾಸಿಯಿಂದ ಸೋಲಲಿದ್ದಾರೆ ಎಂಬ ರಾಹುಲ್ ಮಾತಿಗೆ ತಿರುಗೇಟು ನೀಡಿದ ಬಿಜೆಪಿ, ಅಮ್ಮ ಸೋನಿಯಾ ಹಾಗೂ ಮಗ ರಾಹುಲ್ ಮುಂಬರುವ ಇಬ್ಬರೂ ಲೋಕಸಭಾ ಚುನಾವಣೆಯಲ್ಲಿ ಸೋಲಲಿದ್ದಾರೆ ಎಂದು ತಿರುಗೇಟು ನೀಡಿದೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಅನಿಲ್ ಬಲೂನಿ, ಪ್ರಧಾನಿ ಮೋದಿಯ ವಾರಣಾಸಿ ಕ್ಷೇತ್ರದ ಚಿಂತೆಯನ್ನು ಬಿಟ್ಟು ನಿಮ್ಮ ಕ್ಷೇತ್ರವಾದ ಅಮೇಠಿ ಹಾಗೂ ರಾಯ್ ಬರೇಲಿ ಕ್ಷೇತ್ರದ ಕಡೆಗೆ ಗಮನ ಹರಿಸಿ. ಕಾರಣ ನೀವು ಅಲ್ಲಿ ಸೋಲುವುದು ಖಚಿತ ಎಂದು ತಿರುಗೇಟು ನೀಡಿದ್ದಾರೆ.
ಅಮೇಠಿ ರಾಯ್ ಬರೇಲಿಯ ಮತದಾರರು ಸೋನಿಯಾ ರಾಹುಲ್ ಬಗ್ಗೆ ನಿರಾಶೆ ಹೊಂದಿದ್ದಾರೆ. ಅಲ್ಲಿ ಇವರು ಇದುವರೆಗೆ ಯಾವುದೇ ಅಭಿವೃದ್ಧಿ ಮಾಡಿಲ್ಲ. ಈ ಸಲದ ಚುನಾವಣೆಯಲ್ಲಿ ಅವರ ತಮ್ಮ ಠೇವಣಿಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಅನಿಲ್ ಬಲೂನಿ ಖಾರವಾಗಿ ಪ್ರತಿಕ್ರಯಿಸಿದ್ದಾರೆ.