ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಯತ್ನಾಳ್ ವಿರುದ್ಧ ಯಾವಾಗ ಕ್ರಮ?: ಡಿ.ಕೆ ಸುರೇಶ್ ವ್ಯಂಗ್ಯ

ನ್ಯೂಸ್ ಕನ್ನಡ ವರದಿ: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಸಮರ್ಥಿಸಿ ಮಾತನಾಡಿ, “ಬಿಹಾರ ಚುನಾವಣೆ ಬಳಿಕ ನೋಡಿ ನಿಮಗೇ ಗೊತ್ತಾಗುತ್ತೆ. ಬಿಜೆಪಿಯಲ್ಲಿ ದೊಡ್ಡ ಬದಲಾವಣೆ ಆಗ ಆಗಬಹುದು. ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ ಯತ್ನಾಳ್ ವಿರುದ್ಧ ಇನ್ನೂ ಅವರು ಯಾಕೆ ಕ್ರಮ ಕೈಗೊಂಡಿಲ್ಲ? ಅದರರ್ಥ, ಯತ್ನಾಳ್​ಗೆ ಸುಮ್ನಿರಪ್ಪ ಅಂದಿರಬೇಕು. ಬಿಜೆಪಿಯೊಳಗೆ ಏನೋ ನಡೆಯುತ್ತಿದೆ ಎನ್ನೋದನ್ನ ಇದು ತೋರಿಸುತ್ತಿದೆ. ಈ ತಿಂಗಳಲ್ಲಿ ಏನೇನು ಬದಲಾವಣೆ ಆಗುತ್ತೆ ಕಾದು ನೋಡೋಣ. ದೀಪಾವಳಿಗೆ ಮೋದಿಯವರು ರಾಜ್ಯಕ್ಕೆ ಏನು ಗಿಫ್ಟ್ ಕೊಡುತ್ತಾರೆ ನೋಡೋಣ” ಎಂದು ಡಿಕೆ ಸುರೇಶ್ ವ್ಯಂಗ್ಯವಾಡಿದರು.

ಉಪಚುನಾವಣೆ ಬಳಿಕ ವಿಪಕ್ಷ ನಾಯಕರ ಬದಲಾವಣೆ ಆಗುತ್ತೆ ಎಂಬ ಸಿಎಂ ಹೇಳಿಕೆಯನ್ನು ಡಿಕೆ ಸುರೇಶ್ ತಳ್ಳಿಹಾಕಿದರು. ಕಾಂಗ್ರೆಸ್​ನ ಯಾವ ಶಾಸಕರೂ ಸಿದ್ದರಾಮಯ್ಯರ ಬದಲಾವಣೆ ಬಗ್ಗೆ ಮಾತನಾಡಿಲ್ಲ. ನಮ್ಮ ಹೈಕಮಾಂಡ್ ಕೂಡ ಸಿದ್ದರಾಮಯ್ಯರನ್ನು ಬದಲಾಯಿಸುವ ಮಾತನಾಡಿಲ್ಲ. ಅಂಥದ್ದರಲ್ಲಿ ಯಡಿಯೂರಪ್ಪ ಅವರಿಗೆ ಕನಸು ಬಿದ್ದಿರಬೇಕು. ಅವರಿಗೆ ಇತ್ತೀಚೆಗೆ ಕನಸು ಬೀಳುವುದು ಜಾಸ್ತಿಯಾಗಿರಬೇಕು. ಅದಕ್ಕೆ ಹೀಗೆಲ್ಲಾ ಮಾತನಾಡುತ್ತಿದ್ಧಾರೆ ಎಂದರು.

Leave a Reply

Your email address will not be published. Required fields are marked *