ಏಕ್ ಭಾರತ್-ಏಕ್ ರೇಡಿಯೋ, ಜನವರಿ ೨೬ರಿಂದ ಸ್ಥಳೀಯ ಭಾಷೆಗೆ ಕೊಡಲಿ ಪೆಟ್ಟು.!

ನ್ಯೂಸ್ ಕನ್ನಡ ವರದಿ: ಯಾವುದೇ ಭಾಷೆಯು ಮಾಧ್ಯಮಗಳಲ್ಲಿ ಬಳಕೆಯಾದಾಗ ಅದು ಗಮನಾರ್ಹವಾಗಿ ಬೆಳೆಯುತ್ತದೆ, ಹಾಗಾಗಿ ಆಕಾಶವಾಣಿ ಮತ್ತು ದೂರದರ್ಶನಗಳು ಭಾಷಾ ಬೆಳವಣಿಗೆಯ ದೃಷ್ಟಿಯಿಂದ ಬಹಳ ಮುಖ್ಯವಾದ ಮಾಧ್ಯಮಗಳು. ಉದಾಹರಣೆಗೆ ಮಂಗಳೂರು ಆಕಾಶವಾಣಿಯು ತುಳುವಿಗೆ ಕೊಟ್ಟ ಮಹತ್ವ ಮತ್ತು ಮಡಿಕೇರಿ ಆಕಾಶವಾಣಿಯು ಕೊಡವ ಮತ್ತು ಅರೆಭಾಷೆಗಳಿಗೆ ನೀಡಿದ ಅವಕಾಶಗಳು ಚಾರಿತ್ರಿಕವಾದುವು. ಅದು ಕೆಲವರಿಗೆ ಉದ್ಯೋಗ ನೀಡಿದೆ. ಆಯಾ ಭಾಷೆಗಳಲ್ಲಿ ಹೊಸ ಲೇಖಕರನ್ನು ಸೃಜಿಸಿದೆ, ಸ್ಥಳೀಯ ಸಂಸ್ಕೃತಿಗಳನ್ನು ಪ್ರೋತ್ಸಾಹಿಸಿದೆ.

ಆದರೆ ಈಚಿಗೆ ಬಂದ ವರದಿಯಂತೆ, ಜನವರಿ ೨೬ರಿಂದ ರಾಜ್ಯದ ಪ್ರಾದೇಶಿಕ ಕೇಂದ್ರಗಳಿಂದ ಬಿತ್ತರವಾಗುತ್ತಿರುವ ಕಾಯ೯ಕ್ರಮಗಳನ್ನು ಕೇಂದ್ರೀಕೖತಗೊಳಿಸಲಾಗುತ್ತದೆ ಮತ್ತು ರಾಜ್ಯಗಳ ರಾಜಧಾನಿಗಳಿಂದ ಮರುಬ್ರ್ಯಾಂಡಿಂಗ್ ಸೇವೆ ಆರಂಭವಾಗಲಿದೆ, ಉದಾಹರಣೆಗೆ, ಮಡಿಕೇರಿ, ಹಾಸನ, ಮಂಗಳೂರು ಸೇರಿದಂತೆ ರಾಜ್ಯದ ಒಂಬತ್ತು {ಎಫ್.ಎಂ.ಕೇಂದ್ರ ಸೇರಿದಂತೆ} ಬಾನುಲಿ ಕೇಂದ್ರಗಳ ಕಾಯ೯ಕ್ರಮಗಳು ಬೆಂಗಳೂರು ಕೇಂದ್ರದ ಮೂಲಕವೇ ಪ್ರಸಾರವಾಗಲಿದೆ. ಆಯಾ ರಾಜ್ಯಗಳ ರಾಜಧಾನಿಯಲ್ಲಿರುವ ಆಕಾಶವಾಣಿಯ ಮುಖ್ಯ ಕೇಂದ್ರಗಳೇ ಎಲ್ಲಾ ಕಾಯ೯ಕ್ರಮಗಳನ್ನು ರೂಪಿಸಲಿದೆ. ಎಲ್ಲ ರಾಜ್ಯಗಳ ವೇಳಾ ಪಟ್ಟಿಯೂ ಒಂದೇ ರೀತಿಯಲ್ಲಿರುತ್ತದೆ. ಹೀಗಾದಾಗ ಸಣ್ಣ ಭಾಷೆಗಳ ಸಬಲೀಕರಣಕ್ಕೆ ದೊಡ್ಡ ಹೊಡೆತ ಬೀಳುತ್ತದೆ.ಸಣ್ಣ ಊರುಗಳಿಂದ ಬೆಂಗಳೂರು ವರೆಗೆ ಹೋಗಿ ಸ್ಟುಡಿಯೋದಲ್ಲಿ ರೆಕಾರ್ಡ್‌ ಮಾಡುವುದೂ ಕಡಿಮೆಯಾಗುತ್ತದೆ.

ಸರಕಾರದ ಈ ಕ್ರಮವು ಖಾಸಗಿಯವರಿಗೆ ಎಫ್‌ ಎಂ ಕೇಂದ್ರಗಳನ್ನು ತೆರೆಯಲು ಪರವಾನಿಗೆ ನೀಡಿದಂತೆಯೇ ಆಗುತ್ತದೆ. ಖಾಸಗಿಯವರು ದುಡ್ಡು ಮಾಡ್ತಾರೆ, ಆದ್ರೆ ಭಾಷೆ ಬೆಳೆಸುವುದಿಲ್ಲ ಎಂಬುದನ್ನು ಖಾಸಗೀ ಟಿ ವಿ ಚಾನೆಲ್ ಗಳು ಈಗಾಗಲೇ ಸಾಬೀತು ಪಡಿಸಿವೆ.
ಏನೇ ಇರಲಿ, ಇದನ್ನೆಲ್ಲ ಬೆಂಬಲಿಸುವವರು ತುಳು, ಕೊಡವ, ಅರೆಭಾಷೆಯಂತ ಸಣ್ಣ ಭಾಷೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿರುವುದರಿಂದ ಇದನ್ನು ತಡೆಯುವುದು ಅಸಾಧ್ಯ.

ಈ ನಡುವೆ ಸದ್ಯಕ್ಕೆ ನಮ್ಮ ಮೆಚ್ಚಿನ ಆಕಾಶವಾಣಿ ಕೇಂದ್ರಗಳಿಗೆ ಅಂತಿಮ ವಿದಾಯ ಹೇಳಲಡ್ಡಿಯಿಲ್ಲ.

  • Purushottama Bilimale

Leave a Reply

Your email address will not be published. Required fields are marked *