ಎಸ್.ಪಿ ಕಚೇರಿಯ ಮೇಳಿ ದಾಳಿ ನಡೆಸಿ ದಾಂಧಲೆ: ಬಿಜೆಪಿ ಶಾಸಕನ ಬಂಧನ!
ನ್ಯೂಸ್ ಕನ್ನಡ ವರದಿ-(09.04.18): ಪೊಲೀಸ್ ಸುಪರಿಂಟೆಂಡರ ಕಾರ್ಯಾಲಯದಲ್ಲಿ ಧಾಂಧಲೆ ನಡೆಸಿ ಹಾನಿ ಉಂಟು ಮಾಡಿದ ಆರೋಪದ ಮೇಲೆ ಬಿಜೆಪಿ ಶಾಸಕ ಶಿವಾಜಿ ಕರ್ದಿಲೆ ಅವರನ್ನು ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲಾ ಪೊಲೀಸರು ಬಂಧಿಸಿದರೆಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಇನ್ನೋರ್ವ ಆರೋಪಿಯಾಗಿರುವ ಎನ್ಸಿಪಿ ಶಾಸಕ ಅರುಣ್ ಜಗತಾಪ್ ಅವರು ತಲೆ ಮರೆಸಿಕೊಂಡಿದ್ದು ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ಅಹ್ಮದ್ ನಗರ ಎಸ್ಪಿ ರಂಜನ್ ಕುಮಾರ್ ಶರ್ಮಾ ತಿಳಿಸಿದ್ದಾರೆ. ಶಿವಸೇನೆಯ ಇಬ್ಬರ ನಾಯಕರ ಕೊಲೆಗೆ ಸಂಬಂಧಿಸಿ ಅಹ್ಮದ್ ನಗರ ಎನ್ಸಿಪಿ ಶಾಸಕ ಸಂಗ್ರಾಮ್ ಜಗತಾಪ್ ಅವರನ್ನು ಎಸ್ಪಿ ಕಚೇರಿಯಲ್ಲಿ ಪೊಲೀಸರು ಬಂಧಿಸಿದಾಗ ಈ ಧಾಂಧಲೆ, ಹಾನಿ ಘಟನೆ ಕಳೆದ ಶನಿವಾರ ನಡೆಯಿತೆಂದು ವರದಿಯಾಗಿದೆ.