ಅಣ್ವಸ್ತ್ರ ಪ್ರಮಾಣ ತಗ್ಗಿಸುವ ಕುರಿತು ಅಮೇರಿಕಾದೊಂದಿಗೆ ಮಾತುಕತೆಗೆ ನಾವು ಸಿದ್ಧ: ಉತ್ತರ ಕೋರಿಯಾ

ನ್ಯೂಸ್ ಕನ್ನಡ ವರದಿ(09-04-2018): ಅಣ್ವಸ್ತ್ರದ ಪ್ರಮಾಣವನ್ನು ತಗ್ಗಿಸುವ ಕುರಿತು ನಾವು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಮದಿಗೆ ಮಾತುಕತೆಗೆ ಸಿದ್ಧರಿದ್ದೇವೆ ಎಂದು ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೇಳಿದ್ದಾರೆ.

ಮೂಲಗಳ ಪ್ರಕಾರ ಅಮೆರಿಕ ಅಧ್ಯಕ್ಷ ಡೊನಾವ್ಡ್ ಟ್ರಂಪ್‌ ಮತ್ತು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಂಗ್‌ ಉನ್ ಮುಂದಿನ ತಿಂಗಳು ಭೇಟಿಯಾಗುವ ಸಾಧ್ಯತೆಗಳಿವೆ ಎಂದು ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ. ಈ ಭೇಟಿಯ ಕುರಿತು ಉ.ಕೊರಿಯಾ ಸರ್ಕಾರ ಮತ್ತು ಅಮೆರಿಕ ಅಧಿಕಾರಿಗಳು ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ.

ಇತ್ತೀಚೆಗಷ್ಟೇ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಚೀನಾಕ್ಕೆ ಮಾರ್ಚ್‌ ಕೊನೆ ವಾರದಲ್ಲಿ ಭೇಟಿ ನೀಡಿ, ಅಲ್ಲಿನ ನಾಯಕರೊಂದಿಗೆ ಚರ್ಚಿಸಿದ್ದರು. ಆಗ ಅಣ್ವಸ್ತ್ರಗಳ ಪ್ರಮಾಣ ತಗ್ಗಿಸುವ ಮಾತುಗಳನ್ನು ಆಡಿದ್ದರು. ‘ಶಾಂತಿ ಮರುಸ್ಥಾಪಿಸುವ ನಮ್ಮ ಪ್ರಯತ್ನಕ್ಕೆ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಹೇಗೆ ಪ್ರತಿಕ್ರಿಯೆ ನೀಡುತ್ತವೆ ಎಂಬುದರ ಮೇಲೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಕಿಮ್‌ ತಿಳಿಸಿದ್ದರು.

Leave a Reply

Your email address will not be published. Required fields are marked *