ಕಾವೇರಿ ವಿವಾದದ ಕುರಿತಾದಂತೆ ಕೇಂದ್ರ ಸರಕಾರದ ಮೌನವನ್ನು ಪ್ರಶ್ನಿಸಿದ ಸುಪ್ರೀಮ್ ಕೋರ್ಟ್!

ನ್ಯೂಸ್ ಕನ್ನಡ ವರದಿ-(09.04.18): ಕಾವೇರಿ ನದಿ ನೀರಿನ ಬಳಕೆಯ ಕುರಿತಾದಂತೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಹಲವು ವರ್ಷಗಳಿಂದ ಕಾದಾಟ ನಡೆಯುತ್ತಲೇ ಬಂದಿದೆ. ಮೊನ್ನೆ ತಾನೇ ಈ ಪ್ರಕರಣದ ಕುರಿತಾದಂತೆ ಸುಪ್ರೀಮ್ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪಿನಲ್ಲಿ ಕರ್ನಾಟಕಕ್ಕೆ ಸ್ವಲ್ಪ ಮಟ್ಟಿನ ಜಯ ಸಿಕ್ಕಿತ್ತು. ಕನ್ನಡಿಗರು ನಿರಾಳರಾದರೂ ತಮಿಳುನಾಡಿನ ಜನರು ಈಗಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಇ ಕುರಿತಾದಂತೆ ಮೌನ ವಹಿಸಿರುವ ಕೇಂದ್ರ ಸರಕಾರದ ಧೋರಣೆಯನ್ನು ಸುಪ್ರೀಮ್ ಕೋರ್ಟ್ ಪ್ರಶ್ನಿಸಿದೆ.

ಕಾವೇರಿ ವಿವಾದದ ಕುರಿತಾದಂತೆ ಕೇಂದ್ರ ಸರಕಾರವು ಮೌನ ವಹಸಿರುವುದೇಕೆ? ಇಲ್ಲಿಯವರೆಗೂ ಯಾವುದೇ ರೀತಿ ತೀರ್ಮಾನಗಳನ್ನು ಅಥವಾ ಆದೇಶಗಳನ್ನು ಕೇಂದ್ರ ಸರಕಾರ ಹೊರಡಿಸಲಿಲ್ಲ. ಈ ಪ್ರಕರಣವನ್ನು ಶೀಘ್ರದಲ್ಲೇ ಮುಗಿಸಬೇಕು ಮೇ 3ರ ಒಳಗಾಗಿ ಈ ಕುರಿತಾದಂತೆ ಕೇಂದ್ರ ಸರಕಾರವು ತಮ್ಮ ನಿಲುವನ್ನು ಸಪಷ್ಟಪಡಿಸಿ ಈ ಪ್ರಕರಣವನ್ನು ಮುಗಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಆದೇಶ ನೀಡಿದ್ದಾರೆ. ಕಾವೇರಿ ನದಿ ನೀರಿನ ಕುರಿತಾದಂತೆ ಉಭಯ ರಾಜ್ಯಗಳ ನಡುವೆ ಕಾವೇರಿ ಜಲ ನಿಯಂತ್ರಣಾ ಮಂಡಳಿಯನ್ನು ರಚಿಸಬೇಕೆಂದು ತಮಿಳುನಾಡು ಸರಕಾರ ಮನವಿ ಮಾಡಿದೆ.

Leave a Reply

Your email address will not be published. Required fields are marked *