ಎಲ್ಲರನ್ನೂ ಆಕರ್ಷಿಸುತ್ತಿದೆ ನೀಲಿ ಕಲಾ ಮಣ್ಣಿನ ಆಭರಣಗಳು.!

ನೀಲಿ ಕಲಾ ಟೆರಾಕೋಟ ಜ್ಯುವೆಲರೀಸ್….

ನ್ಯೂಸ್ ಕನ್ನಡ ವರದಿ: ಹೆಣ್ಣುಮಕ್ಕಳಿಗೆ ಆಭರಣಗಳ ಮೇಲೆ ವಿಶೇಷ ಒಲವು. ಫ್ಯಾಷನ್‌ ಪಲ್ಲಟಗಳನ್ನು ಸಂತೋಷದಿಂದ ಸ್ವೀಕರಿಸುವ ಅವರು ಕಾಲಕ್ಕೆ ತಕ್ಕಂತೆ ಬದಲಾಗುವ ಫ್ಯಾಷನ್‌ಗಳಿಗೆ ಬಲುಬೇಗನೇ ಹೊಂದಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಕೈ ಬೀಸಿ ಕರೆಯುವ ಫ್ಯಾನ್ಸಿ ಆಭರಣಗಳ ಪೈಕಿ ಟೆರಾಕೋಟ ಅಥವಾ ಮಣ್ಣಿನ ಆಭರಣವೂ ಒಂದು.

ಮಣ್ಣಿನ ಗುಣವೇ ಅಂಥದ್ದು. ಮಣ್ಣಿನ ವಾಸನೆಯಷ್ಟೇ ಅಲ್ಲ, ಅದರಲ್ಲಿ ತಯಾರಾದ ಸಣ್ಣ ವಸ್ತುವಿಗೂ ದೇಸಿ ಸೊಬಗಿದೆ. ಮಣ್ಣು ಮನಸಿಗಷ್ಟೇ ಅಲ್ಲ ಮೈಯಿಗೂ ಒಪ್ಪುವ ಗುಣವಂತೆ.

ಹೌದು. ಮಣ್ಣಿನಿಂದ ಮಾಡಿದ ಬಗೆಬಗೆ ವಿನ್ಯಾಸದ ಆಭರಣಗಳು ಈಗ ಹೆಣ್ಣಿನ ಮೈಯನ್ನು ಅಲಂಕರಿಸುತ್ತಿವೆ. ವಿವಿಧ ಬಣ್ಣಗಳಲ್ಲಿ ಉಡುಪಿಗೆ ತಕ್ಕಂತೆ ದೊರೆಯುವ ಟೆರಾಕೋಟ ಆಭರಣಗಳು ಎಲ್ಲಾ ವಯೋಮಾನದವರಿಗೂ ಆಪ್ಯಾಯಮಾನ.

ಚಿನ್ನ, ಬೆಳ್ಳಿ, ಪ್ಲಾಟಿನಂ ಮತ್ತಿತರ ಲೋಹಗಳಲ್ಲಿ ನಮಗೆ ಬೇಕಾದ ವಿನ್ಯಾಸದ ಆಭರಣಗಳು ದೊರೆಯುವುದು ಕಷ್ಟ. ದೊರೆತರೂ ಉಡುಪಿಗೆ ಹೊಂದುತ್ತದೆಯೇ, ಹೊಂದಿದರೂ ಬೆಲೆಯನ್ನು ಭರಿಸಬಹುದೇ ಎಂದು ಯೋಚನೆ ಮಾಡುವುದು ಸಾಮಾನ್ಯ.

ಆದರೆ, “#ನೀಲಿಕಲಾ ದಲ್ಲಿ” ದೊರೆಯುವ “ಟೆರಾಕೋಟ” ಆಭರಣಗಳಲ್ಲಿ ಇಂಥಹ ರಗಳೆಗಳಿಲ್ಲ. ಕಾಲೇಜು ಹುಡುಗಿಯರಿಂದ ಹಿಡಿದು 60ರ ವಯೋಮಾನದವರಿಗೂ ಥರಾವರಿ ವಿನ್ಯಾಸದ ಟೆರಾಕೋಟ ಆಭರಣಗಳು #ನೀಲಿಕಲಾ_ಟೆರಾಕೋಟ ಜ್ಯುವೆಲರಿಯಲ್ಲಿ ದೊರೆಯುತ್ತವೆ.

ಟೆರಾಕೋಟ ಆಭರಣಗಳು ನಿಮ್ಮನ್ನು ನೂರು ಜನರಲ್ಲಿ ಎದ್ದು ಕಾಣುವಂತೆ ಮಾಡುತ್ತವೆ. ದೇಸಿ ಸಂಸ್ಕೃತಿಯನ್ನು ಬಿಂಬಿಸುವ ಈ ಆಭರಣಗಳು ಮೈ–ಮನಸ್ಸಿಗೆ ಸಂತಸವನ್ನೂ ನೀಡುವುದಂತು ಸತ್ಯ.

ಟೆರಾಕೋಟಜ್ಯುವೆಲರಿಯವಿನ್ಯಾಸಕಿಯ_ಅಭಿಪ್ರಾಯ:

ಸೃಜನಶೀಲ ವ್ಯಕ್ತಿತ್ವದವರು ಹೆಚ್ಚಾಗಿ ಟೆರಾಕೋಟ ಆಭರಣಗಳನ್ನು ಧರಿಸುತ್ತಾರೆ. ಅವರಿಗೆ ಬೇಕಾದ ವಿನ್ಯಾಸದಲ್ಲಿ ಉಡುಪಿಗೆ ತಕ್ಕಂತೆ ಹೊಂದುವ ಆಭರಣಗಳನ್ನು ತಯಾರಿಸಿಕೊಡುತ್ತೇನೆ’ ಎನ್ನುತ್ತಾರೆ ನೀಲಿ ಕಾಲಾ ಟೆರಾಕೋಟ ಜ್ಯುವೆಲರಿಯ ವಿನ್ಯಾಸಕಿ ನೀಲಿ. ಉದಾಹರಣೆಗೆ, ಕಾಲೇಜು ಹುಡುಗಿಯರು ಆಧುನಿಕ ವಿನ್ಯಾಸ ಇಷ್ಟಪಟ್ಟರೆ, ಗೃಹಿಣಿಯರು ಪುರಾತನ ಶೈಲಿಯ ಅಂದರೆ ಆ್ಯಂಟಿಕ್‌ ಮಾದರಿಯ ಆಭರಣಗಳನ್ನು ಬಯಸುತ್ತಾರೆ. ಉದ್ಯೋಗಸ್ಥ ಮಹಿಳೆಯರು ಜೀನ್ಸ್‌, ಕುರ್ತಾ, ಕಾಟನ್‌ ಸೀರೆಗಳ ಬಣ್ಣ, ವಿನ್ಯಾಸಕ್ಕೆ ತಕ್ಕ ಆಭರಣಗಳನ್ನು ತಯಾರಿಸಿಕೊಡಿ ಎಂದು ಬೇಡಿಕೆ ಮಂಡಿಸುತ್ತಾರೆ. ಇನ್ನೂ ಟೆರಾಕೋಟ ಆಭರಣವನ್ನು ಬರೀ ಮಹಿಳೆಯರು ಮಾತ್ರವಲ್ಲದೆ ಸುಮಾರು ಪುರುಷರು ಸಹ ತೊಡುತ್ತಾರೆ ಅವರಿಗೆ ಇಷ್ಟವಾಗುವಂತಹಾ ಜ್ಯುವೆಲರಿ ವಿನ್ಯಾಸ ಮಾಡಿಕೊಡಲಾಗುತ್ತದೆ ಅನ್ನುತ್ತಾರ ನೀಲಿಯವರು. ಅದರಲ್ಲೂ ಸಾಫ್ಟ್‌ವೇರ್ ಕ್ಷೇತ್ರದ ಮಹಿಳೆಯರಿಗೆ ಈ ಆಭರಣಗಳೆಂದರೆ ಪಂಚಪ್ರಾಣ ಎಂಬುದು ಟೆರಾಕೋಟ ಆಭರಣ ವಿನ್ಯಾಸಕರ ಅಭಿಪ್ರಾಯ.

ಮುಖ್ಯವಾಗಿ: ತಾನು ಕಲಿತಿದ್ದನ್ನು ಇನ್ನೊಂದಷ್ಟು ಜನರಿಗೆ ಹೇಳಿಕೊಡುವುದು ಮನುಷ್ಯ ಮನುಷ್ಯನನ್ನು ಬೆಳೆಸುವ ದೊಡ್ಡ ಗುಣ ಈ ಗುಣವನ್ನು ನೀಲಿ ಕಲಾ ಟೆರಾಕೋಟ ಜ್ಯುವೆಲರಿ ಬಳಗ ಬೆಳೆಸಿಕೊಂಡಿದ್ದು, ಕಳೆದ ಸೆಪ್ಟೆಂಬರ್ 15ರಿಂದ ಆನ್ ಲೈನ್ ಟೆರಾಕೋಟ ಕ್ಲಾಸ್ ಅನ್ನು ಆರಂಬಿಸಿ ಯಶಸ್ವಿಯಾಗಿ ಮುಕ್ತಾಯಗೊಳಿಸಿದ್ದಾರೆ. ಹೊಸ ವರ್ಷದ ಬ್ಯಾಚ್ ಈಗಾಗಲೇ ಶುರುವಾಗಿದ್ದು ಟೆರಾಕೋಟ ಜ್ಯುವಲರಿ ತಯಾರಿಸುವುದನ್ನು ಸುಲಭ ರೀತಿಯಲ್ಲಿ ಕಲಿಸಿಕೊಡಲಾಗುತ್ತದೆ ಕಲಿಯುವ ಆಸೆ, ಪ್ರೀತಿ, ಶ್ರದ್ಧೆ ಇರುವವರು ಸೇರಿಕೊಳ್ಳಬಹುದು, ಅನುಕೂಲಕ್ಕೆ ತಕ್ಕಂತೆ ತರಗತಿಗಳು ಎರಡು ಬ್ಯಾಚ್ ಹೊಂದಿದ್ದು ವಾರದ ನಾಲ್ಕು ದಿನ ಹಾಗೂ ವಾರಾಂತ್ಯದ ತರಗತಿಗಳು ನಡೆಯಲಿದ್ದು ಆಸಕ್ತರು ಸಂಪರ್ಕಿಸಿ ನಂಬರ್ ಈ ಕೆಳಕಂಡಂತಿದೆ.

ಇದುಮಹಿಳೆಯರಿಗಾಗಿಮಾತ್ರ ಎಂದು ತಿಳಿಸಿದ್ದಾರೆ. ನಿಮ್ಮ ನಿರಾಯಾಸ ಮಣ್ಣಿನೊಟ್ಟಿಗಿನ ಪಯಣಕ್ಕೆ ನೀಲಿ ಕಲಾ ಟೆರಾಕೋಟ ಜ್ಯುವೆಲರಿ ಬಳಗ ಜೊತೆಯಾಗುತ್ತಿದೆ.

ಟೆರಾಕೋಟ ಕ್ಲಾಸ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲಿಚ್ಚಿಸುವವರು ದಯವಿಟ್ಟು +917676960671 ನಂಬರ್ಗೆ ಕರೆ ಮಾಡಿ.

ಮಣ್ಣಿನ ಆವರಣವನ್ನು ಕೊಳ್ಳುವವರು ಮತ್ತು ಹೆಚ್ಚಿನ ಮಾಹಿತಿ ತಿಳಿಯಲಿಚ್ಚಿಸುವವರು ದಯವಿಟ್ಟು +917676960671 ನಂಬರ್ಗೆ ಕರೆ ಮಾಡಿ

~ ಚಂದನ್ ಕುಮಾರ್

Leave a Reply

Your email address will not be published. Required fields are marked *