ಸತ್ತು ದಫನ ಮಾಡಲಾದ ವ್ಯಕ್ತಿ ನಾಲ್ಕು ದಿನಗಳ ಬಳಿಕ ಎದ್ದು ಬಂದ ! ಶಾಕ್ ಗೊಂಡ ಪತ್ನಿ ….ಕುತೂಹಲಕಾರಿ ಘಟನೆಯನ್ನೊಮ್ಮೆ ಓದಿ

ಸತ್ತು ದಫನವಾದ ವ್ಯಕ್ತಿಯೋರ್ವ ಜೀವಂತವಾಗಿ ಎದ್ದು ಬಂದರೆ ಮನೆಯವರಿಗೆ ಶಾಕ್ ಹೇಗಾಗಬಹುದು…! ಇಂಥ ಘಟನೆಯೊಂದು ನಡೆದಿದ್ದು, ಸತ್ತ ವ್ಯಕ್ತಿಯೊಬ್ಬ ಅಂತ್ಯಸಂಸ್ಕಾರವಾದ ನಾಲ್ಕು ದಿನಗಳ ಬಳಿಕ ಎದ್ದುಬಂದಿದ್ದಾನೆ. ಈ ಘಟನೆ ನಡೆದಿರುವುದು ಕೇಂದ್ರ ಅಮೆರಿಕದ ಹೊಂಡುರಾಸ್ ದೇಶದಲ್ಲಿ. ಈ ಕುತೂಹಲಕಾರಿ ಘಟನೆಯನ್ನೊಮ್ಮೆ ಓದಿ…..

ಶವಗಾರದಲ್ಲಿ ಮೃತದೇಹವನ್ನು ತಪ್ಪಾಗಿ ಗುರುತಿಸಿ ಅಪರಿಚಿತನ ಶವ ಕೊಂಡೊಯ್ದು ಶವಸಂಸ್ಕಾರ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಇದಕೆಲ್ಲಾ ಬಹುಮುಖ್ಯ ಕಾರಣವಾಗಿದ್ದು ಕೋವಿಡ್​ -19.

ವಿಕ್ಟೋರಿಯಾ ಸರ್ಮಿಂಟೊ ಎಂಬಾಕೆ ತನ್ನ ಪತಿ ಜೂಲಿಯೋ (65) ಮನೆಗೆ ಮರಳಲು ವಿಫಲವಾದ ಬಳಿಕ ಆತನ ಹುಡುಕಾಟದಲ್ಲಿಯೇ ಅನೇಕ ದಿನಗಳನ್ನು ಕಳೆದಿದ್ದಳು. ಕಳೆದ ಬುಧವಾರ (ಡಿ. 30) ಪತಿಯ ಗುರುತಿನ ದಾಖಲೆಗಳನ್ನು ತೆಗೆದುಕೊಂಡು ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿದ್ದಳು. ದಾಖಲೆಗಳನ್ನು ತೋರಿಸಿದಾಗ ಇತ್ತೀಚೆಗೆ ಕರೊನಾ ವೈರಸ್​ ಸೋಂಕಿನಿಂದ ಈತ ಮೃತಪಟ್ಟಿದ್ದಾನೆಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

ಇದಾದ ಬಳಿಕ ಶವಗಾರದಲ್ಲಿ ಪತಿಯ ಶವವನ್ನು ಗುರುತಿಸಿದ ಸರ್ಮಿಂಟೊ ಅಂತ್ಯಸಂಸ್ಕಾರದ ನಿರ್ದೇಶಕರೊಬ್ಬರನ್ನು ನೇಮಿಸಿಕೊಂಡು ಶವವನ್ನು ಆಸ್ಪತ್ರೆಯಿಂದ ಸುಮಾರು 30 ಮೈಲಿ ದೂರದ ಹೊಂಡುರಾಸ್​ ದೇಶದ ಪಶ್ಚಿಮ ಪುರಸಭೆಯ ಸ್ಯಾನ್ ನಿಕೋಲಸ್‌ ಬಳಿ ಇರುವ ತನ್ನ ಹಳ್ಳಿಗೆ ತೆಗೆದುಕೊಂಡು ಹೋಗುತ್ತಾಳೆ. ಬಳಿಕ ಸಂಬಂಧಿಕರ ಜತೆ ಸೇರಿ ಸಂಸ್ಕಾರವನ್ನು ಮುಗಿಸುತ್ತಾರೆ. ಇದಕ್ಕಾಗಿ ಆಕೆ 320 ಪೌಂಡ್​ (31,854 ರೂಪಾಯಿ) ಖರ್ಚು ಮಾಡಿರುತ್ತಾಳೆ.

ಸಂಸ್ಕಾರವಾಗಿ ನಾಲ್ಕು ದಿನಗಳು ಕಳೆದರೂ ಗಂಡ ಇಲ್ಲವೆಂಬ ಕೊರಗು ಸರ್ಮಿಂಟೊಗೆ ಕಾಡುತ್ತಿರುತ್ತದೆ. ಹೀಗಿರುವಾಗ ಗಂಡನ ದಿಢೀರ್​ ಎಂಟ್ರಿಯಿಂದ ಆಕೆ ದಿಗ್ಭ್ರಾಂತಗೊಳ್ಳುತ್ತಾಳೆ. ನೆರೆಯ ಪುರಸಭೆ ಟ್ರಿನಿಡಾಡ್​ನ ಮೈದಾನದಲ್ಲಿ ಗಾಯಗೊಂಡು ಬಿದ್ದಿದ್ದ ಆತನನ್ನು ರಕ್ಷಿಸಿ ಸ್ಥಳೀಯರೊಬ್ಬರು ಮನೆಗೆ ತಂದು ಬಿಟ್ಟಿರುತ್ತಾರೆ. ಊಟ, ನೀರಿಲ್ಲದೆ ತುಂಬಾ ನಿತ್ರಾಣನಾಗಿರುತ್ತಾನೆ.

ಗಂಡ ಬಂದಿದ್ದನ್ನು ನೋಡಿ ಸರ್ಮಿಂಟೊಗೆ ಅಚ್ಚರಿಯ ಜತೆಗೆ ಖುಷಿಯು ಆಗುತ್ತದೆ. ಬಳಿಕ ಆಸ್ಪತ್ರೆಯವರನ್ನು ದೂರುವ ಆಕೆ, ಮೃತದೇಹಗಳನ್ನು ಪರೀಕ್ಷಿಸಿ ತಿಳಿದುಕೊಂಡು ವಿತರಿಸಬೇಕು. ಸಿಬ್ಬಂದಿಯ ನಿರ್ಲಕ್ಷ್ಯದಿಂದ ಹೀಗೆ ನಡೆದಿದೆ ಎಂದು ಆರೋಪಿಸಿದ್ದಾರೆ. ಇತ್ತ ಆಸ್ಪತ್ರೆಯವರು ಮಹಿಳೆಯೇ ತಪ್ಪಾಗಿ ಗುರುತಿಸಿ ಶವವನ್ನು ಕೊಂಡೊಯ್ದಳು ಎಂದಿದ್ದಾರೆ. ಏನೇ ಆಗಲಿ ಪ್ರಕರಣವೇನೋ ಸುಖಾಂತ್ಯ ಕಂಡಿದೆ. ಆದರೆ, ಅಂತ್ಯಸಂಸ್ಕಾರವಾದ ಮೃತದೇಹದ ಗುರುತು ನಿಗೂಢವಾಗಿಯೇ ಉಳಿದುಕೊಂಡಿದೆ.

Leave a Reply

Your email address will not be published. Required fields are marked *