ಪಾಕ್ ಭಯೋತ್ಪಾಧನೆಗೆ ಕುಮ್ಮಕ್ಕು ನೀಡುತ್ತಿರುವುದರಿಂದ ಭಾರತ ಸಾರ್ಕ್ ನಲ್ಲಿ ಪಾಲ್ಗೊಳ್ಳುವುದಿಲ್ಲ: ವಿದೇಶಾಂಗ ಸಚಿವಾಲಯ

ನ್ಯೂಸ್ ಕನ್ನಡ ವರದಿ(09-04-2018): ಸತತವಾಗಿ ಗಡಿಯಾಚೆಗಿನ ಭಯೋತ್ಪಾಧನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ಧೋರಣೆಯಿಂದಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳ ಒಕ್ಕೂಟದ ಸಾರ್ಕ್ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವುದು ಸಾಧ್ಯವಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.

ಪ್ರಧಾನಿ ಮೋದಿ ಹಾಗೂ ನೇಪಾಳದ ಪ್ರಧಾನ ಮಂತ್ರಿ ಕೆ.ಪಿ.ಶರ್ಮ ಒಲಿ ಅವರ ಭೇಟಿಯ ನಂತರ ಸಾರ್ಕ್ ಸಮ್ಮೇಳನದಲ್ಲಿ ಪಾಲ್ಗೊಳ್ಳದಿರುವ ತೀರ್ಮಾನಕ್ಕೆ ಬರಲಾಯಿತು.

ಕಠ್ಮಂಡುವಿನಲ್ಲಿ ನಡೆದ ಸಾರ್ಕ್ ಶೃಂಗ ಸಭೆಯಲ್ಲಿ ಸ್ವತಹ ಪ್ರಧಾನಿ ಮೋದಿಯವರೇ ಭಾಗವಹಿಸಿದ್ದರು ಈದರೆ ನಂತರ ಪಾಕಿಸ್ತಾನವು ಸತತವಾಗಿ ಭಯೋತ್ಪಾಧನೆ ಚಟುವಟಿಕೆಗಳ ಮೂಲಕ ಭಾರತದ ಗಡಿಯಲ್ಲಿ ಪ್ರಕ್ಷುಬ್ಧತೆಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದೆ. ಈ ಕಾರಣದಿಂದಾಗಿ ಭಾರತವು ಮುಂಬರುವ ಸಾರ್ಕ್ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಹೇಳಿದ್ದಾರೆ.

Leave a Reply

Your email address will not be published. Required fields are marked *