ಪ್ರಧಾನಿ ಮೋದಿ ಪಕ್ಷಿಗಳಿಗೆ ಕಾಳು ತಿನಿಸಿದ್ದೆ ಎಲ್ಲೆಡೆ ಹಕ್ಕಿಜ್ವರ ಹಬ್ಬಲು ಕಾರಣ ! ಇದನ್ನು ಹೇಳಿದ್ದು ಯಾರು ಗೊತ್ತೇ..?

ಲಕ್ನೋ: ಪ್ರಧಾನಿ ಮೋದಿ ಪಕ್ಷಿಗಳಿಗೆ ಕಾಳು ತಿನಿಸಿದ್ದೆ ಎಲ್ಲೆಡೆ ಹಕ್ಕಿಜ್ವರ ಹಬ್ಬಲು ಕಾರಣ ! ಇದನ್ನು ಹೇಳಿದ್ದು ಖುದ್ದು ಸಮಾಜವಾದಿ ಪಕ್ಷದ ನಾಯಕ ಐಪಿ ಸಿಂಗ್.

ಲೋಕ ಕಲ್ಯಾಣ ಮಾರ್ಗದ ನಿವಾಸದಲ್ಲಿ ವಾಯು ವಿಹಾರ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ನವಿಲಿಗೆ ಕಾಳು ತಿನ್ನಿಸುವ ದೃಶ್ಯಗಳನ್ನು ಹಂಚಿಕೊಂಡಿದ್ದರು. ಈ ದೃಶ್ಯ ಸಾಕಷ್ಟು ವೈರಲ್​ ಕೂಡ ಆಗಿತ್ತು. ಇದೀಗ ಈ ಘಟನೆಯನ್ನು ಹಕ್ಕಿಜ್ವರದೊಂದಿಗೆ ತಳುಕು ಹಾಕಿರುವ ಸಮಾಜವಾದಿ ಪಕ್ಷದ ನಾಯಕ, ಪ್ರಧಾನಿ ಮೋದಿ ಪಕ್ಷಿಗಳಿಗೆ ಕಾಳು ತಿನಿಸಿದ ಪರಿಣಾಮವೇ ಎಲ್ಲೆಡೆ ಹಕ್ಕಿಜ್ವರ ಹಬ್ಬಿದೆ ಎಂದು ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಸಮಾಜವಾದಿ ಪಕ್ಷದ ನಾಯಕ ಐಪಿ ಸಿಂಗ್​, ಏನು ಮಾಡುವುದು ಈ ವ್ಯಕ್ತಿಗೆ? ಅವರು ಪಕ್ಷಿಗಳಿಗೆ ಆಹಾರವಿತ್ತರು. ಅದು ಹಕ್ಕಿಜ್ವರದಲ್ಲಿ ಕೊನೆಗೊಂಡಿತು ಎಂದು ಕುಹುಕವಾಡಿದ್ದಾರೆ. ಅಷ್ಟೇ ಅಲ್ಲದೇ ಈ ಹಕ್ಕಿ ಜ್ವರ ದೇಶದಲ್ಲಿ ಗಂಭೀರವಾಗಿದ್ದು, ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಟೀಕಿಸಿದ್ದಾರೆ.

ಹಕ್ಕಿ ಜ್ವರ ದೇಶಾದ್ಯಂತ ಗಂಭೀರ ಸಮಸ್ಯೆಯಾಗಿದೆ, ಉತ್ತರ ಪ್ರದೇಶ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಸಿದ್ಧತೆ ನಡೆಸಿಲ್ಲ. ಸಿಎಂ ಯೋಗಿ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಗಳನ್ನು ನೀಡಿದ್ದಾರೆ. ಆದರೆ, ಇಂತಹ ಹೇಳಿಕೆಗಳು ಸಮಸ್ಯಗಳನ್ನು ಬಗೆಹರಿಸುವುದಿಲ್ಲ ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಕೇರಳ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಹಲವು ಕಡೆ ಹಕ್ಕಿ ಜ್ವರ ಕಾಣಿಸಿಕೊಂಡು ಆತಂಕ ಉಂಟು ಮಾಡಿದೆ, ಈ ಜ್ವರದ ನಿಯಂತ್ರಣಕ್ಕೆ ಕೇಂದ್ರ ಸರ್ಕಾರವು ಕಾರ್ಯಾಚರಣೆಗೆ ಮುಂದಾಗಿದೆ. ಅಲ್ಲದೇ ಈ ಹಕ್ಕಿ ಜ್ವರಗಳು ಮಾನವರಿಗೆ ಹರಡುವ ಸಾಧ್ಯತೆ ಕೂಡ ಹೆಚ್ಚಿರುವ ಹಿನ್ನಲೆ ನಿಯಂತ್ರಣ ಘಟಕ ಸ್ಥಾಪಿಸಿದ್ದು, ಮುನ್ನೆಚ್ಚರಿಕೆ ಕ್ರಮವಹಿಸಲಾಗಿದೆ.

ದೇಶದ ನಾಲ್ಕು ರಾಜ್ಯಗಳಲ್ಲಿ ಈ ಹಕ್ಕಿ ಜ್ವರ ಆತಂಕ ಮೂಡಿಸಿದ್ದು, ಎಲ್ಲಾ ರಾಜ್ಯಗಳಲ್ಲಿಯೂ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಕೋಳಿ, ಬಾತು ಕೋಳಿಗಳು, ಕಾಗೆಗಳು ಮತ್ತು ವಲಸೆ ಹಕ್ಕಿಗಳಲ್ಲಿ ಸೋಂಕನ್ನು ಮತ್ತಷ್ಟು ಹರಡದಂತೆ ಎಚ್ಚರಿಕೆವಹಿಸುವಂತೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *