ಕತ್ತಲಲ್ಲೇ ಮುಳುಗಿದ ಪಾಕ್ ! ಪವರ್ ಗ್ರಿಡ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ವಿದ್ಯುತ್ ಇಲ್ಲದೇ ಪರದಾಡಿದ ಜನ

ಇಸ್ಲಾಮಾಬಾದ್: ಪವರ್ ಗ್ರಿಡ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಪಾಕಿಸ್ತಾನದ ಜನ ನಿನ್ನೆ ರಾತ್ರಿ ಕತ್ತಲಲ್ಲಿ ದಿನದೂಡುವಂತಾಯಿತು.

ಅದರಲ್ಲೂ ಪಾಕಿಸ್ತಾನದ ಪ್ರಮುಖ ನಗರಗಳಾದ ಕರಾಚಿ, ಲಾಹೋರ್, ಇಸ್ಲಾಮಾಬಾದ್, ರಾವಲ್ಪಿಂಡಿ ಮತ್ತು ಮುಲ್ತಾನ್‍ನಲ್ಲಿ ಕತ್ತಲೆ ತೀವ್ರವಾಗಿ ಆವರಿಸಿತು.

ಪಾಕಿಸ್ತಾನದ ರಾಷ್ಟ್ರೀಯ ಪವರ್ ಗ್ರಿಡ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ, ಸಂಪೂರ್ಣ ಪಾಕಿಸ್ತಾನ ಕತ್ತಲಲ್ಲಿ ಮುಳುಗಿದ ಪ್ರಸಂಗ ನಡೆದಿದೆ.

ಈ ಕುರಿತು ಮಾಹಿತಿ ನೀಡಿರುವ ಪಾಕಿಸ್ತಾನದ ಇಂಧನ ಸಚಿವ ಒಮರ್ ಅಯೂಬ್ ಖಾನ್, ವಿದ್ಯುತ್ ಪ್ರಸರಣ ವ್ಯವಸ್ಥೆಯಲ್ಲಿನ ಆವರ್ತನದಲ್ಲಿ ಹಠಾತ್ ಕುಸಿತದಿಂದಾಗಿ ದೇಶಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಪಾಕಸ್ತಾನದ ಪ್ರಮುಖ ನಗರಗಳಲ್ಲಿ ಸಂಫೂರ್ಣವಾಗಿ ಕತ್ತಲು ಆವರಿಸಿದ್ದು, ತಾಂತ್ರಿಕ ದೋಷ ಸರಿಪಡಿಸಲು ಪಾಕಿಸ್ತಾನ ರಾಷ್ಟ್ರೀಯ ಪವರ್ ಗ್ರಿಡ್‌ ಹೆಣಗಾಡುತ್ತಿದೆ.

ಕರಾಚಿ, ಲಾಹೋರ್, ರಾವಲ್‌ಪಿಂಡಿ, ಮುಲ್ತಾನ್ ಸೇರಿದಂತೆ ಪ್ರಮುಖ ನಗರಗಳು ವಿದ್ಯುತ್ ವ್ಯಥ್ಯಯವನ್ನು ಎದುರಿಸಿದ್ದು, ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಭಾಗದಲ್ಲೂ ವ್ಯತ್ಯಯ ಕಂಡುಬಂದಿದೆ ಎಂದು ಸ್ಥಳೀಯ ಮಾದ್ಯಮಗಳು ವರದಿ ಮಾಡಿವೆ.

ಸದ್ಯ ತಾಂತ್ರಿಕ ದೋಷ ನಿವಾರಣೆಗೆ ಪಾಕಿಸ್ತಾನದ ರಾಷ್ಟ್ರೀಯ ಪವರ್ ಗ್ರಿಡ್ ಮುಂದಾಗಿದ್ದು, ಶೀಘ್ರದಲ್ಲೇ ವಿದ್ಯುತ್ ಸೇವೆ ದೊರೆಯಲಿದೆ ಎಂದು ಸಚಿವ ಒಮರ್ ಅಯೂಬ್ ಖಾನ್ ಭರವಸೆ ನೀಡಿದ್ದಾರೆ.

ಇನ್ನು ಪಾಕಿಸ್ತಾನದ ವಿದ್ಯುತ್ ವ್ಯತ್ಯಯ ಭಾರತ ಹಾಗೂ ಪಾಕಿಸ್ತಾನದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗುತ್ತಿದ್ದು, ಟ್ವಿಟ್ಟರ್‌ನಲ್ಲಿ #blackout ಭಾರೀ ಟ್ರೆಂಡ್ ಆಗಿದೆ.

Leave a Reply

Your email address will not be published. Required fields are marked *