ಫೆ.21ಕ್ಕೆ ಮಿಸೆಸ್ ಸೌತ್ ಇಂಡಿಯಾ ಆಡಿಷನ್
2021ರ ಮಿಸೆಸ್ ಸೌತ್ ಇಂಡಿಯಾ ಆಮ್ ಪವರ್ಫುಲ್ ಸ್ಪರ್ಧೆಗೆ ಆಡಿಷನ್ ನಡೆಯಲಿದೆ. ಫೆಬ್ರುವರಿ 21ರಂದು ಬೆಳಿಗ್ಗೆ 11 ಗಂಟೆಗೆ ವಸಂತನಗರದ ಶ್ರಾಂಘ್ರಿಲಾ ಹೋಟೆಲ್ನಲ್ಲಿ ಆಡಿಷನ್ ಯೋಜಿಸಲಾಗಿದೆ.
ನಂದಿನಿ ನಾಗರಾಜ್ ಆಯೋಜಿಸಿರುವ ಆಡಿಷನ್ನಲ್ಲಿ 18ರಿಂದ 55 ವರ್ಷದೊಳಗಿನ ಮಹಿಳೆಯರು ಪಾಲ್ಗೊಳ್ಳುವ ಅವಕಾಶ ನೀಡಲಾಗಿದೆ. ಆಡಿಷನ್ನಲ್ಲಿ ಆಯ್ಕೆಯಾದವರು ಮಿಸೆಸ್ ಸೌತ್ ಇಂಡಿಯಾ ಆಮ್ ಪವರ್ಫುಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಗೆದ್ದವರು ಮಿಸೆಸ್ ಇಂಡಿಯಾ ಆಮ್ ಪವರ್ಫುಲ್ನಲ್ಲಿ ಪಾಲ್ಗೊಳ್ಳುತ್ತಾರೆ. ಇಲ್ಲಿ ಗೆದ್ದ ಸ್ಪರ್ಧಿಗಳು ಸಿಂಗಪೂರದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.
ಹೆಸರು ನೋಂದಾಯಿಸಲು 9901755163 ಗೆ ಕರೆ ಮಾಡಬಹುದು.