ಬಾಲಕೋಟ್ ದಾಳಿಯಲ್ಲಿ 300 ಮಂದಿ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿದ ಭಾರತೀಯ ಮಾಧ್ಯಮಗಳ ಬಣ್ಣ ಬಯಲು.!

ನ್ಯೂಸ್ ಕನ್ನಡ ವರದಿ: ಇವತ್ತು ಎಲ್ಲ ಪತ್ರಿಕೆಗಳಲ್ಲಿ ನೀವು ಒಂದು ಸುದ್ದಿಯನ್ನು ಓದಿರುತ್ತೀರಿ. ಪಾಕಿಸ್ತಾನದ ಮಾಜಿ ಅಧಿಕಾರಿಯೊಬ್ಬರು ಬಾಲಾಕೋಟ್ ನಲ್ಲಿ ಭಾರತ‌ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಿಂದ ಮುನ್ನೂರು ಉಗ್ರಗಾಮಿಗಳು ಹತರಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂಬುದು ಈ ಸುದ್ದಿಯ ತಿರುಳು. ಸುದ್ದಿಯ ಮೂಲ ಇರುವುದು ಪಾಕಿಸ್ತಾನದ ಒಂದು ಟೀವಿ ಡಿಬೇಟ್ ನಲ್ಲಿ. ಭಾರತ ಮುನ್ನೂರು ಮಂದಿಯನ್ನು ಸಾಯಿಸುವ ಇರಾದೆ ಹೊಂದಿತ್ತು ಎಂದು ಆ ಅಧಿಕಾರಿ ಹೇಳಿದ್ದನ್ನು ನಮ್ಮ ಟೀವಿ ಚಾನಲ್ಲುಗಳು ಮುನ್ನೂರು ಮಂದಿಯನ್ನು ಸಾಯಿಸಲಾಯಿತು ಎಂದು ತಿರುಚಿದವು. ಮಾರ‌್ನಾ ಥಾ ಎಂಬ ಪದವನ್ನು ಎಡಿಡ್ ಮಾಡಿ ಮಾರಾ ಥಾ ಎಂದು ತಿರುಚಲಾಗಿತ್ತು. ಅದೇ ಅಧಿಕಾರಿ, ಅದೇ ಸಂದರ್ಶನದಲ್ಲಿ ಬಾಲಾಕೋಟ್ ದಾಳಿಯಲ್ಲಿ ಒಬ್ಬೇ ಒಬ್ಬ ವ್ಯಕ್ತಿಯನ್ನೂ ಸಾಯಿಸಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಹೇಳಿದ್ದನ್ನು ಮುಚ್ಚಿಟ್ಟುಬಿಟ್ಟವು. ನಮ್ಮ ಕನ್ನಡದ ಬಹುತೇಕ ಪತ್ರಿಕೆಗಳು ಸೇರಿದಂತೆ ದೇಶದ ಸಾವಿರಾರು ಪತ್ರಿಕೆ, ಚಾನಲ್ ಗಳು ಈ ಫೇಕ್ ಸುದ್ದಿಯನ್ನು ಪ್ರಸಾರ ಮಾಡಿದವು.

ಯಥಾಪ್ರಕಾರ ಆಲ್ಟ್ ನ್ಯೂಸ್ ಇದನ್ನು ಬಯಲಿಗೆಳೆಯಿತು. ಇಡೀ ಡಿಬೇಟಿನ ವಿಡಿಯೋ ಇಟ್ಟುಕೊಂಡು ಸುದ್ದಿ ಎಷ್ಟು ಸುಳ್ಳು ಎಂಬುದನ್ನು ಬಹಿರಂಗಗೊಳಿಸಿತು. ರಿಪಬ್ಲಿಕ್ ಟಿವಿ ಪ್ರಸಾರ ಮಾಡಿದ ಕ್ಲಿಪ್ ನಲ್ಲಿ ವಿಡಿಯೋ ತಿರುಚಿರುವುದನ್ನೂ ಸಾಕ್ಷಿ‌ಸಮೇತ ರುಜುವಾತು ಮಾಡಿತು. ಆಲ್ಟ್ ನ್ಯೂಸ್ ಈ ಡಿಬೇಟಿನ ಯೂಟ್ಯೂಬ್ ಲಿಂಕ್ ಸಮೇತ ಎಲ್ಲವನ್ನು ಪಾರದರ್ಶಕವಾಗಿ ಜನರ ಮುಂದೆ ಇಟ್ಟಿತು.

ಮುಂದೇನಾಯಿತು ಎಂಬುದು ಮಜವಾದ ವಿಷಯ. ಐಟಿ ಸೆಲ್ ಸಿಟ್ಟಿಗೆದ್ದು ಬ್ಯಾನ್ ಆಲ್ಟ್ ಇಂಡಿಯಾ ಎಂಬ‌ ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡಿಸುತ್ತಿದೆ. ಸತ್ಯವನ್ನು ಸತ್ಯ ಎಂದರೆ ಇವರ ಮೈಗೆಲ್ಲ ಬೆಂಕಿ ಬಿದ್ದಂಗೆ ಆಡುವುದು ಯಾಕೆ ಎಂದರೆ ಇವರ ಫೇಕ್ ನ್ಯೂಸ್ ಫ್ಯಾಕ್ಟರಿಗಳನ್ನು ಒಂದಾದಮೇಲೊಂದರಂತೆ ಬಯಲು ಮಾಡುತ್ತ ಬಂದಿದ್ದು ಇದೇ ಆಲ್ಟ್ ನ್ಯೂಸ್. ಭಕ್ತರು ಅನ್ನ, ಚಪಾತಿ ಇಲ್ಲದಿದ್ದರೆ ಬದುಕಬಹುದೇನೋ, ಆದರೆ ಫೇಕ್ ನ್ಯೂಸ್ ಇಲ್ಲದೆ ಬದುಕಲಾರರು. ಆಲ್ಟ್‌ ನ್ಯೂಸ್ ಅದನ್ನೇ ಅಲುಗಾಡಿಸುತ್ತಿದೆ, ಅದಕ್ಕಾಗಿ ಬ್ಯಾನ್ ಮಾಡಿ ಬ್ಯಾನ್ ಮಾಡಿ ಎಂದು‌ ಬೊಬ್ಬೆ ಹೊಡೆಯುತ್ತಿವೆ. ಅಂದಹಾಗೆ ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆ ಬ್ಯಾನ್ ಆಗಿದ್ದಕ್ಕೆ ಇದೇ ಭಕ್ತಗಣ ಒಂದೇ ಸಮನೆ ಕೂಗಾಡಿ, ಅಭಿವ್ಯಕ್ತಿ ಸ್ವಾತಂತ್ರ ಹರಣ ಕೂಡದು ಎಂದು ಅಬ್ಬರಿಸಿ ಒಂದು ದಿನವೂ ಆಗಿಲ್ಲ. ಅದು ಇನ್ನೊಂದು ತಮಾಶೆ.

ಆಲ್ಟ್ ನ್ಯೂಸ್ ಮಾಡಿರುವ ಮೂಲ ಸುದ್ದಿ ಪೂರ್ತಿ ಲಿಂಕ್ ಕೆಳಗಿದೆ. ಒಂದಷ್ಟು ದಾಖಲೆಗಳು ಲಿಂಕ್ ನಲ್ಲೆ ಇವೇ ವೀಕ್ಷಿಸಿ.

https://www.altnews.in/indian-media-falsely-claims-pak-diplomat-admits-300-killed-in-balakot-airstrike/

Leave a Reply

Your email address will not be published. Required fields are marked *