ಮಣ್ಣಿನಡಿ ಮಾನವನ ಹೆಬ್ಬೆರಳು ಕಂಡ ಮಹಿಳೆ ! ಪೋಲೀಸರ ಪರಿಶೀಲನೆಯಿಂದ ಹೊರಬಿತ್ತು ಅಸಲಿಯತ್ತು !!

ಲಂಡನ್​: ಈ ಮೇಲಿನ ಚಿತ್ರ ನೋಡಿದರೆ ಖಂಡಿತವಾಗಿಯೂ ಮಾನವನ ಹೆಬ್ಬೆರಳು ಎಂದುಕೊಳ್ಳಲೇಬೇಕು ! ಮಣ್ಣಿನಡಿ ಮಾನವನ ಹೆಬ್ಬೆರಳು ಮೊದಲು ಕಂಡ ಮಹಿಳೆಗೆ ಹೇಗಾಗಬಹುದು..? ಇದೊಂದು ಕುತೂಹಲಭರಿತ ಘಟನೆ !

ತನ್ನ ಸಾಕು ನಾಯಿಯೊಂದಿಗೆ ವಿಹಾರಕ್ಕೆಂದು ಹೊರಟ ಇಂಗ್ಲೆಂಡ್​ನ ಗೇಟ್​ಶೀಡ್​ನ ವಿನ್​ಲ್ಯಾಟನ್​ ನಿವಾಸಿ ಕೇಟೀ ವಿಲ್ಕಿನ್ಸನ್ ಎಂಬ ಮಹಿಳೆಯೊಬ್ಬಳು ಕೆಸರು ಭೂಮಿಯಲ್ಲಿ ವಿಚಿತ್ರ ವಸ್ತುವೊಂದನ್ನು ನೋಡಿದ್ದಾಳೆ. ಮಾನವನ ಹೆಬ್ಬೆರಳು ಅಂದುಕೊಂಡ ಮಹಿಳೆ ಭಯದಿಂದಲೇ ಪೊಲೀಸರಿಗೆ ಕರೆ ಮಾಡಿ ತಿಳಿಸುತ್ತಾಳೆ. ಪೊಲೀಸರು ಬಂದು ಪರಿಶೀಲಿಸಿದಾಗ ಕಾದಿತ್ತು ದೊಡ್ಡ ಶಾಕ್ !

ಎಂದಿನಂತೆ ತನ್ನ ನಾಯಿಯನ್ನು ವಿಲ್ಕಿನ್ಸನ್ ವಾಕಿಂಗ್​ಗೆ ಕರೆದೊಯ್ದಿದ್ದರು. ಆದರೆ, ತುಂಬಾ ಮಳೆ ಬಿದ್ದಿದ್ದರಿಂದ ತಾವು ಹೋಗಿದ್ದ ಪ್ರದೇಶದ ಕೆಸರುಮಯವಾಗಿತ್ತು. ಯಾವುದೇ ಕಾರಣ ಕೆಸರಿಗೆ ಕಾಲಿಟ್ಟು ಜಾರಿ ಬೀಳುಬಾರದು ಎಂದು ಕೆಸರಿನ ಮೇಲೆಯೇ ತನ್ನ ಸೂಕ್ಷ್ಮ ದೃಷ್ಟಿ ಹಾಯಿಸಿ ಹಾದುಹೋಗುವಾಗ ಆಕೆಯ ಕಣ್ಣಿಗೆ ವಸ್ತುವೊಂದು ಕಾಣುತ್ತದೆ.

ತಕ್ಷಣ ಅದರ ಫೋಟೋವನ್ನು ತೆಗೆದು ಏನಿರಬಹುದು ಎಂದು ನೆಟ್ಟಿಗರು ಅಭಿಪ್ರಾಯ ತಿಳಿದುಕೊಳ್ಳಲು ವಿಲ್ಕಿನ್ಸನ್ ಜಾಲತಾಣದಲ್ಲಿ ಪೋಸ್ಟ್​ ಮಾಡುತ್ತಾರೆ. ಅಲ್ಲದೆ, ಸ್ನೇಹಿತರಿಗೆ ಕಳುಹಿಸುತ್ತಾಳೆ. ತಕ್ಷಣ ಪ್ರತಿಕ್ರಿಯೆ ನೀಡುವ ನೆಟ್ಟಿಗರು ನಿಗೂಢ ವಸ್ತು ನೋಡಲು ಹೆಬ್ಬರಳಿನಂತಿದೆ ಎಂದು ಕಾಮೆಂಟ್​ ಮಾಡುತ್ತಾರೆ. ಇದಾದ ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಲು ವಿಲ್ಕಿನ್ಸನ್ ಮುಂದಾಗುತ್ತಾರೆ.

ಬಳಿಕ 101 ಪೊಲೀಸ್​ ಸಹಾಯವಾಣಿಗೆ ಕರೆ ಮಾಡಿ ವಿಚಾರ ತಿಳಿಸುತ್ತಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಪೊಲೀಸ್​ ಕಾರು ವಿಲ್ಕಿನ್ಸನ್ ಮನೆ ಮುಂದೆ ನಿಲ್ಲುತ್ತದೆ. ಬಳಿಕ ಆಕೆ ಪೊಲೀಸ್​ ಅಧಿಕಾರಿಗಳನ್ನು ವಿಚಿತ್ರ ವಸ್ತು ನೋಡಿದ ಜಾಗಕ್ಕೆ ಕರೆದೊಯ್ಯುತ್ತಾಳೆ. ತಕ್ಷಣ ಪೊಲೀಸರು ತನಿಖೆಯನ್ನು ಆರಂಭಿಸುತ್ತಾರೆ. ಈ ವೇಳೆ ಇನ್ನಷ್ಟು ಪೊಲೀಸರು, ಯೋಧರು ಮತ್ತು ಪತ್ತೆದಾರರು ಸ್ಥಳಕ್ಕೆ ಆಗಮಿಸುತ್ತಾರೆ. ತಾನು ತೆಗೆದಂತಹ ಫೋಟೋವನ್ನು ಮಹಿಳೆ ಎಲ್ಲರಿಗೂ ತೋರಿಸುತ್ತಾ ಘಟನೆಯನ್ನು ವಿವರಿಸುತ್ತಾಳೆ.

ನೋಡಲು ಹೆಬ್ಬರಳಿನಂತಿದೆ ಎಂದು ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. ಆದರೆ, ಸಾಕಷ್ಟು ಹುಡುಕಾಡಿದಾಗ ಏನು ಪತ್ತೆಯಾಗುವುದಿಲ್ಲ. ಕೊನೆಗೆ ಸ್ನಿಫರ್ ನಾಯಿಗಳನ್ನು ಸ್ಥಳಕ್ಕೆ ಕರೆಯಿಸಿದಾಗ ವಸ್ತುವಿನ ಅಸಲಿಯತ್ತು ತಿಳಿದು ಎಲ್ಲರು ಬೆಕ್ಕಸ ಬೆರಗಾಗುತ್ತಾರೆ. ಅಂದಹಾಗೆ ಅದು ಮಾನವನ ಹೆಬ್ಬೆರಳಲ್ಲ, ಬದಲಾಗಿ “ಆಲೂಗೆಡ್ಡೆ” ಎಂಬುದು ಗೊತ್ತಾಗುತ್ತದೆ.

ಈ ಬಗ್ಗೆ ಮಾತನಾಡಿರುವ ವಿಲ್ಕಿನ್ಸನ್, ಖಂಡಿತವಾಗಿಯೂ ಅದು ಹೆಬ್ಬೆರಳು ಆಗಿರಬಾರದೆಂದು ಭಾವಿಸಿದೆವು. ನಿಜವಾಗಿಯೂ ವಿಲಕ್ಷಣವಾಗಿ ಕಾಣುವ ಸಸ್ಯ ಅಥವಾ ಏನಾದರೂ ಆಗಿರಬೇಕು ಅಂದುಕೊಂದು ಮನೆಗೆ ಹಿಂತಿರುಗಿದೆ. ಆದರೆ. ಆ ಬಗೆಗಿನ ನನ್ನ ಯೋಚನೆ ನಿಲ್ಲಲಿಲ್ಲ. ನನ್ನ ತಲೆಯಲ್ಲಿ ಗಿರಕಿ ಹೊಡೆಯುತ್ತಿತ್ತು. ಬೇರೊಬ್ಬರ ಕಾಲಿನಿಂದ ಕತ್ತರಿಸಿದ ಹೆಬ್ಬೆರಳು ಅಥವಾ ದೇಹಕ್ಕೆ ಅಂಟಿಕೊಂಡಿರಬಹುದು ಎಂದು ಯೋಚಿಸುತ್ತಿದ್ದೆ. ಮೊದಲೇ ತೆಗೆದಿದ್ದ ಫೋಟೋವನ್ನು ನನ್ನ ಎಲ್ಲ ಸ್ನೇಹಿತರಿಗೆ ಕಳುಹಿಸಿದೆ ಮತ್ತು ಜಾಲತಾಣದಲ್ಲಿಯೂ ಪೋಸ್ಟ್​ ಮಾಡಿದೆ. ಎಲ್ಲರೂ ಸಹ ಅದು ಹೆಬ್ಬರಳು ಇರಬಹುದು ಎಂದರು. ಖಚಿತಪಡಿಸಿಕೊಳ್ಳಲು ಪೊಲೀಸರಿಗೆ ಕರೆ ಮಾಡಿ ತಿಳಿಸಿದೆ. ಕೊನೆಗೂ ತೆಗೆದು ನೋಡುವಷ್ಟರಲ್ಲಿ ಅದು ಆಲೂಗೆಡೆಯಾಗಿತ್ತು ಎಂದು ವಿಲ್ಕಿನ್ಸನ್ ತಿಳಿಸಿದ್ದಾರೆ.

ಆಲೂಗೆಡ್ಡೆಯಿಂದ ಎಂದು ತಿಳಿದ ಮೇಲೆ ನಾನು ಪೊಲೀಸ್​ ಅಧಿಕಾರಿಗಳ ಕ್ಷಮೆಯಾಚಿಸಿದೆ. ಸಮಯ ಹಾಳು ಮಾಡಿದ್ದಕ್ಕೆ ಕ್ಷಮಿಸಿ ಎಂದು ಪದೇಪದೆ ಕೇಳಿದೆ. ನೀವು ಸರಿಯಾದುದ್ದನ್ನೇ ಮಾಡಿದ್ದೀರಿ ಎಂದು ಪೊಲೀಸ್​ ಅಧಿಕಾರಿಗಳು ನನ್ನನ್ನು ಸಮಾಧಾನ ಮಾಡಿದರು ಎಂದು ವಿಲ್ಕಿನ್ಸನ್ ತಿಳಿಸಿದ್ದು, ಆಲೂಗೆಡ್ಡೆ ಅಲ್ಲಿಗೆ ಹೇಗೆ ಬಂದಿರಬಹುದು ಎಂದು ನಮಗೆ ಅಂದಾಜಿಸಲು ಆಗಲಿಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *