ದೇಶದೆಲ್ಲೆಡೆ ರವಾನೆಯಾಗುತ್ತಿದೆ ಕೋವಿಶೀಲ್ಡ್​ ಕೊರೋನಾ ಲಸಿಕೆ

ಣೆ: ಮಾರಕ ಕೊರೋನಾ ವೈರಸ್​ನಿಂದಾಗಿ ದೇಶವೇ ಕಂಗೆಟ್ಟಿರುವ ಸಂದರ್ಭದಲ್ಲಿ ಪುಣೆಯಲ್ಲಿರುವ ಸೀರಮ್​ ಇನ್ಸ್​ಟಿಟ್ಯೂಟ್​ನಿಂದ ಕೋವಿಶೀಲ್ಡ್ ಲಸಿಕೆಯನ್ನು ಹೊರತಂದಿದ್ದು, ಈ ಲಸಿಕೆಯನ್ನು ಹೊತ್ತ ಸ್ಪೈಸ್ ಜೆಟ್ ವಿಮಾನ ದೆಹಲಿಗೆ ಹೊರಟಿದ್ದಾರೆ, ಇತ್ತ ಅದರ ಜೊತೆಗೆ ಮೂರು ಟ್ರಕ್ ಗಳಲ್ಲಿ ದೇಶದ 13 ಕಡೆಗಳಿಗೆ ಪುಣೆಯ ಸೆರಂ ಇನ್ಸ್ಟಿಟ್ಯೂಟ್ ನಿಂದ ಕೋವಿಡ್-19 ಲಸಿಕೆ ರವಾನಿಸಲಾಗುತ್ತಿದೆ.

ದೇಶಾದ್ಯಂತ ಸಂಕ್ರಾಂತಿ ಮುಗಿದ ಬಳಿಕ ಜನವರಿ 16ರಂದು ಲಸಿಕೆ ಅಭಿಯಾನ ನಡೆಯಲಿದ್ದು ಅದಕ್ಕೂ ಮೊದಲೇ ಇಂದು ಕೋವಿಶೀಲ್ಡ್ ದೇಶದ ವಿವಿಧ ಭಾಗಗಳಿಗೆ ತಲುಪಲಿದೆ. ತೀವ್ರ ಭದ್ರತೆ ನಡುವೆ ಮೊದಲ ಹಂತದಲ್ಲಿ ಲಸಿಕೆಯನ್ನು ಮೂರು ಟ್ರಕ್ ಗಳಲ್ಲಿ ದೇಶದ ವಿವಿಧ ಕಡೆಗಳಿಗೆ ತಲುಪಿಸಲಾಗುತ್ತಿದೆ.

ಮೊದಲ ಹಂತದ ರವಾನೆಯಲ್ಲಿ 1088 ಕೆಜಿ ತೂಕದ ಕೋವಿಶೀಲ್ಡ್ ಲಸಿಕೆ ಹೊತ್ತ 34 ಪೊಟ್ಟಣಗಳನ್ನು ಪುಣೆಯಿಂದ ದೆಹಲಿಗೆ ರವಾನಿಸಲಾಗಿದೆ ಎಂದು ಸ್ಪೈಸ್ ಜೆಟ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ತಿಳಿಸಿದ್ದಾರೆ.

ಪುಣೆ ವಿಮಾನ ನಿಲ್ದಾಣದಿಂದ ಲಸಿಕೆಯನ್ನು ಹೊತ್ತ ಮೊದಲ ವಿಮಾನ ದೆಹಲಿಗೆ ಹೊರಡಲಿದೆ ಎಂದು ಕೋವಿಶೀಲ್ಡ್ ಲಸಿಕೆಯನ್ನು ಪುಣೆಯಿಂದ ವಿವಿಧ ವಿಮಾನ ನಿಲ್ದಾಣಗಳಿಗೆ ತಲುಪಿಸುವ ಹೊಣೆ ಹೊತ್ತಿರುವ ಎಸ್ ಬಿ ಲಾಜಿಸ್ಟಿಕ್ಸ್ ತಂಡದ ಸಂದೀಪ್ ಬೊಸಲೆ ತಿಳಿಸಿದ್ದಾರೆ.

ಒಟ್ಟು 8 ವಿಮಾನಗಳು, ಎರಡು ಕಾರ್ಗೊ ವಿಮಾನಗಳು ಮತ್ತು ಇತರ ನಿತ್ಯದ ವಾಣಿಜ್ಯ ವಿಮಾನಗಳು ಲಸಿಕೆಯನ್ನು ಹೊತ್ತೊಯ್ಯಲಿವೆ. ಇಂದು ಬೆಳಗ್ಗೆ 10 ಗಂಟೆಗೆ ಎಲ್ಲಾ ಲಸಿಕೆಗಳು ವಿತರಣೆಯಾಗಲಿವೆ ಎಂದು ವಿವರಿಸಿದರು.

ಇಂದು ಪುಣೆಯಿಂದ ದೆಹಲಿ, ಚೆನ್ನೈ, ಕೋಲ್ಕತ್ತಾ, ಗುವಾಹಟಿ, ಶಿಲ್ಲಾಂಗ್, ಅಹಮದಾಬಾದ್, ಹೈದರಾಬಾದ್, ವಿಜಯವಾಡ, ಭುವನೇಶ್ವರ, ಪಾಟ್ನಾ, ಬೆಂಗಳೂರು, ಲಕ್ನೊ ಮತ್ತು ಚಂಡೀಗಢಕ್ಕೆ 56.5 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ 9 ವಿಮಾನಗಳಲ್ಲಿ ಏರ್ ಇಂಡಿಯಾ, ಸ್ಪೈಸ್ ಜೆಟ್ ಮತ್ತು ಇಂಡಿಗೊ ವಿಮಾನದಲ್ಲಿ ರವಾನೆಯಾಗಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಎಸ್ ಪುರಿ ತಿಳಿಸಿದ್ದಾರೆ.

ಇಂದು ದೆಹಲಿ, ಕರ್ನಲ್, ಅಹಮದಾಬಾದ್, ಚಂಡೀಗಢ, ಲಕ್ನೊ, ಚೆನ್ನೈ, ಬೆಂಗಳೂರು, ಹೈದರಾಬಾದ್, ವಿಜಯವಾಡ, ಭುವನೇಶ್ವರ, ಕೋಲ್ಕತ್ತಾ ಮತ್ತು ಗುವಾಹಟಿಗಳಿಗೆ ತಲುಪಲಿವೆ. ಕಳೆದೊಂದು ತಿಂಗಳಲ್ಲಿ 50ಕ್ಕೂ ಹೆಚ್ಚು ದೇಶಗಳಲ್ಲಿ 5 ಕೋಟಿಗೂ ಅಧಿಕ ಮಂದಿಗೆ ಕೋವಿಡ್-19 ಲಸಿಕೆಯನ್ನು ಹಾಕಲಾಗಿದೆ.

Leave a Reply

Your email address will not be published. Required fields are marked *