ಆಂಡ್ರೆ ರಸೆಲ್ ತಲೆಗೆ ಗುರಿಯಿಟ್ಟು ಬೌಲಿಂಗ್ ಮಾಡಲು ಹೇಳಿದ ಕೊಹ್ಲಿ: ಉಮೇಶ್ ಯಾದವ್ ಮಾಡಿದ್ದೇನು?
ನ್ಯೂಸ್ ಕನ್ನಡ ವರದಿ-(08.04.18): ದೇಶದಾದ್ಯಂತ ಇಂಡಿಯನ್ ಪ್ರೀಮಿಯರ್ ಲೀಗ್ ಹವಾ ಪ್ರಾರಂಭಗೊಂಡಿದೆ. ನಿನ್ನೆ ತಾನೇ ಐಪಿಎಲ್ ಅಧಿಕೃತವಾಗಿ ಉದ್ಘಾಟನೆಗೊಂಡಿತ್ತು. ಪ್ರಥಮ ಪಂದ್ಯದಲ್ಲಿ ಮುಖಾಮುಖಿಯಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯಾಟವು ವೀಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುವಲ್ಲಿ ಸಫಲವಾಗಿತ್ತು. ಇದೀಗ ನಿನ್ನೆ ರಾಯಲ್ ಚಾಲೆಂಜೆರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆದಿದ್ದು, ಈ ವೇಳೆ ವಿರಾಟ್ ಕೊಹ್ಲಿ ಹಾಗೂ ಉಮೇಶ್ ಯಾದವ್ ನಡುವೆ ಪ್ರಹಸನವೊಂದು ನಡೆದಿದೆ.
ನಿನ್ನೆ ರಾಯಲ್ ಚಾಲೆಂಜರ್ಸ್ ತಂಡವು ಕೋಲ್ಕತ್ತಾ ತಂಡಕ್ಕೆ 177 ರನ್ ಗಳ ಗುರಿಯನ್ನು ನೀಡಿತ್ತು. ಈ ಮೊತ್ತಕ್ಕಿಂತ ಕೆಳಗೆ ಕೋಲ್ಕತ್ತಾ ತಂಡವನ್ನು ಕಟ್ಟಿ ಹಾಕಬೇಕಿದ್ದರೆ ಮೊದಲು ದಿನೇಶ್ ಕಾರ್ತಿ ಕ್ ಮತ್ತು ರಸೆಲ್ ರನ್ನು ಔಟ್ ಮಾಡಬೇಕಿತ್ತೆಂದು ನಾಯಕ ಕೊಹ್ಲಿಗೆ ತಿಳಿದಿತ್ತು. ಈ ನಡುವೆ ಉಮೇಶ್ ಯಾದವ್ 17ನೇ ಓವರ್ ಎಸೆಯುತ್ತಿದ್ದ ವೇಳೆ ಚೆಂಡನ್ನು ರಸೆಲ್ ತಲೆಗೆ ಗುರಿಯಿಟ್ಟು ಎಸೆಯಲು ಹೇಳಿದರು. ಕೊಹ್ಲಿಯ ಮಾತನ್ನು ಅಕ್ಷರಶಃ ಪಾಲಿಸಿದ ಉಮೇಶ್ ಯಾದವ್, 17.3ನೇ ಎಸೆತವನ್ನು ಸೀದಾ ರಸೆಲ್ ತಲೆಗೆ ಗುರಿಯಿಟ್ಟು ಎಸೆದರು.
ಈ ವೀಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ.