ದಲಿತರಿಗೆ ಕಿರುಕುಳ ನೀಡಲೆಂದೇ ನಿತೀಶ್ ಕುಮಾರ್ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಿದ್ದಾರೆ: ಮಾಂಝಿ
ನ್ಯೂಸ್ ಕನ್ನಡ ವರದಿ(09-04-2018): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ ಕಾನೂನಿನ ಮೂಲಕ ದಲಿತರಿಗೆ ಕಿರುಕುಳ ನೀಡುತ್ತಿದ್ದಾರೆ, ಒಂದು ವೇಳೆ ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಈ ಕಾನೂನನ್ನು ಹಿಂಡೆಯಲಾಗುವುದು ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ಜೆಡಿ ಮೈತ್ರಿಕೂಟದ ಅಂಗವಾಗಿರುವ ಜಿತನ್ ರಾಮ್ ಮಾಂಝಿ ಹೇಳಿದ್ದಾರೆ.
ಆರ್ಜೆಡಿ ಮುಖಂಡ ತೇಜಸ್ವೀ ಯಾದವ್ ಜೊತೆ ಗರೀಬ್ ರ್ಯಾಲಿಯಲ್ಲಿ ಮಾತನಾಡಿದ ಮಾಂಝಿ ನಾನು ಮದ್ಯ ನಿಷೇದದ ವಿರೋಧಿಯಲ್ಲ ಆದರೆ ನಿತೀಶ್ ಕುಮಾರ್ ರವರ ಈ ಕಠೋರ ಧೋರಣೆಯು ಹಿಂದುಳಿದ ಸಮುದಾಯವನ್ವು ದಮನಿಸುವ ತಂತ್ರದ ಬಾಗವಾಗಿದೆ ಎಂದರು. ಅಕ್ರಮ ಮದ್ಯ ಮಾರಾಟದಲ್ಲಿ ಈ ಸಮುದಾಯದ ಜನರನ್ನೇ ಸರಕಾರ ಗುರಿಯಾಗಿಸುತ್ತಿದೆ ಎಂದರು.
ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷದ ಹಲವು ಮುಖಂಡರು ಮದ್ಯ ಮಾರಾಟದ ಮುಖಾಂತರ ಹಣ ಮಾಡುತ್ತಿದ್ದಾರೆ. ರಾಜ್ಯದ ಪೋಲಿಸ್ ಇಲಾಖೆಗೆ ಇದು ತಿಳಿದಿದ್ದರೂ ಪೋಲಿಸರು ಅತ್ತ ಮುಖಮಾಡದೆ ದಲಿತ ಸಮುದಾಯದವರ ಮೇಲೆ ದಾಳಿ ಮಾಡುತ್ತಿದ್ದಾರೆ. ಅಕ್ರಮ ಮದ್ಯ ಮಾರಾಟದಿಂದಾಗಿ ಜೈಲು ಪಾಲಾಗಿರುವ ಸುಮಾರು 80 ಶೇಖಡಾದಷ್ಟು ಮಂದಿ ದಲಿತರಾಗಿದ್ದಾರೆ ಎಂದು ಮಾಂಝಿ ಆರೋಪಿಸಿದ್ದಾರೆ.