ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡ ಪೆಟ್ರೋಲ್, ಡೀಸಲ್ ದರ

ನವದೆಹಲಿ: ದೇಶದಲ್ಲಿ ಇಂಧನ ಬೆಲೆ ಏರಿಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಮೇಲಿಂದ ಮೇಲೆ ಏರುತ್ತಲೇ ಇದ್ದು, ಗ್ರಾಹಕರ ನಿದ್ದೆಗೆಡುವಂತೆ ಮಾಡಿದೆ. ಈಗ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ದಾಖಲೆ ಪ್ರಮಾಣಕ್ಕೆ ಏರಿಕೆಯಾಗಿವೆ.

ಪೆಟ್ರೋಲ್, ಡೀಸಲ್ ದರ ಮತ್ತೆ ಹೆಚ್ಚಳವಾಗಿದ್ದು. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಐದು ದಿನಗಳ ನಂತರ ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ. ಪ್ರತೀ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ತಲಾ 25 ಪೈಸೆ ಏರಿಕೆಯಾಗಿದ್ದು. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 91.07 ರೂ ಗೆ ಏರಿಕೆಯಾಗಿದ್ದು, ಡೀಸೆಲ್ 81.34 ರೂಗಳನ್ನು ತಲುಪಿದೆ.

ಇನ್ನು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 84.45ರೂ ಗೆ ಏರಿಕೆಯಾಗಿದ್ದು, ಡೀಸೆಲ್ ದರ 74.63 ರೂಗೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 85.92 ಮತ್ತು ಡೀಸೆಲ್ 78.22 ರೂ ಮತ್ತು ಚೆನ್ನೈನಲ್ಲಿ ಪೆಟ್ರೋಲ್ 87.18 ಮತ್ತು ಡೀಸೆಲ್ 79.95 ರೂ. ಗಳಷ್ಟಿದೆ.

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 26 ಪೈಸೆ ಏರಿಕೆಯಾಗಿದ್ದು, ಆ ಮೂಲಕ ಪೆಟ್ರೋಲ್ ದರ 87.28ಕ್ಕೆ ಏರಿಕೆಯಾಗಿದೆ. ಅಂತೆಯೇ ಡೀಸೆಲ್ ದರದಲ್ಲಿ ಕೂಡ 26 ಪೈಸೆ ಏರಿಕೆಯಾಗಿದ್ದು,, ಪ್ರತೀ ಲೀಟರ್ ಡೀಸೆಲ್ ದರ 79.12 ರೂಗೆ ಏರಿಕೆಯಾಗಿದೆ.

ಇದು 2018 ರ ಅಕ್ಟೋಬರ್ 4 ರಂದು ದಾಖಲೆಯ ಬೆಲೆ 91.34 ರೂ.ಗಿಂತ ಕೇವಲ 27 ಪೈಸೆ ಕಡಿಮೆಯಾಗಿದೆ. 29 ದಿನಗಳವರೆಗೆ ಬೆಲೆಗಳು ಸ್ಥಿರವಾಗಿದ್ದ ನಂತರ ತೈಲ ಕಂಪನಿಗಳು ಜನವರಿ 06 ಮತ್ತು 07 ರಂದು ಎರಡೂ ಇಂಧನಗಳ ಬೆಲೆಯನ್ನು ಹೆಚ್ಚಿಸಿದ್ದವು. ಜನವರಿ 6 ಮತ್ತು 7 ರಂದು ಪೆಟ್ರೋಲ್ ಬೆಲೆ 49 ಪೈಸೆ ಆಗಿದ್ದರೆ, ಡೀಸೆಲ್ ಬೆಲೆಯನ್ನು 51 ಪೈಸೆ ಹೆಚ್ಚಿಸಿದೆ. ಬುಧವಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 25 ಪೈಸೆ ಹೆಚ್ಚಿದ್ದು, ಪೆಟ್ರೋಲ್ ಹೊಸ ದಾಖಲೆಯ ಮಟ್ಟವನ್ನು 84.45 ರೂ.ಗೆ ತಲುಪಿದೆ. ಡೀಸೆಲ್ ಲೀಟರ್‌ಗೆ 74.63 ರೂ.ಗೆ ಏರಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಹೊಸ ವರ್ಷದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಬಲವಾದ ಪ್ರವೃತ್ತಿ ಕಂಡುಬಂದಿದೆ. ತೈಲ ರಫ್ತು ದೇಶಗಳ ಸಂಸ್ಥೆ ಒಪೆಕ್ ಮಾರ್ಚ್‌ನಲ್ಲೂ ಉತ್ಪಾದನಾ ಕಡಿತವನ್ನು ಮುಂದುವರಿಸಲು ಒಪ್ಪಿಕೊಂಡಿದ್ದು, ಇದು ಬೆಲೆಗಳನ್ನು ಹೆಚ್ಚಿಸಿದೆ.

Leave a Reply

Your email address will not be published. Required fields are marked *