ಸತ್ತವರೊಂದಿಗೆ ಮಾತನಾಡಲು ಇಲ್ಲಿದೆ “ಟೆಲಿಫೋನ್ ಬೂತ್” ! ಮಾತನಾಡಲು ಬರುತ್ತಾರೆ ನೂರಾರು ಮಂದಿ…

ಈ ಟೆಲಿಫೋನ್ ಬೂತ್ ವಿಶ್ವದಲ್ಲಿಯೇ ಎಲ್ಲರ ಕುತೂಹಲಕ್ಕೆ ಕಾರಣವಾದದ್ದು, ಅದಕ್ಕೆ ಕಾರಣನು ಇದೆ. ಟೆಲಿಫೋನ್ ಬೂತ್’ನಲ್ಲಿ ಫೋನ್ ಇದೆಯಾದರೂ, ಕನೆಕ್ಷನ್ ಇಲ್ಲ. ಆದರೂ ನೂರಾರು ಜನರು ಇಲ್ಲಿ ಬಂದು ಫೋನ್ ಮೂಲಕ ಮಾತನಾಡುತ್ತಾರೆ!

ಇದಿರುವುದು ಜಪಾನ್‌ನ ಒತ್ಸುಕಿಯಲ್ಲಿ. ಈ ಬೂತಿನಲ್ಲಿ ಜನರು ಮೃತ ಪ್ರಿಯರೊಂದಿಗೆ ಮಾತನಾಡುತ್ತಾರೆ. ಇಲ್ಲಿ ಬರುವ ಜನರು ಫೋನ್ ತೆಗೆದುಕೊಂಡು ಯಾವುದೊ ನಂಬರ್ ಡಯಲ್ ಮಾಡಿ ತಮ್ಮ ದುಃಖ ಹೇಳುತ್ತಾರೆ. ಮನಸಿನಲ್ಲಿ ಇರುವ ಎಲ್ಲಾ ಭಾವನೆಗಳನ್ನೂ ಹೊರ ಹಾಕುತ್ತಾರೆ. ಇದರಿಂದ ಮನಸು ಹಗುರಾಗುತ್ತದೆಯಂತೆ. ಈ ಬೂತಿನ ಫೋನಿಗೆ ವಿಂಡ್ ಫೋನ್ ಎನ್ನುತ್ತಾರೆ.

ಇಲ್ಲಿಗೆ ಹೆಚ್ಚಾಗಿ 2011ರಲ್ಲಿ ಉಂಟಾದ ಸುನಾಮಿಯಲ್ಲಿ ಪ್ರಾಣ ಕಳೆದುಕೊಂಡ 20 ಸಾವಿರ ಮಂದಿಯ ಸಂಬಂಧಿಕರೇ ಬರುತ್ತಾರೆ.

ಒತ್ಸುಕಿಯ ಇತರು ಸಸಾಕಿ ಎನ್ನುವವರು ಸುನಾಮಿ ಆಗುವ ಒಂದು ವರ್ಷಕ್ಕೆ ಮುಂಚೆ ತಮ್ಮ ಸಹೋದರನ್ನು ಕಳೆದುಕೊಂಡಿದ್ದರು. ತಮ್ಮ ಸಹೋದರನ ನೆನಪಿನಲ್ಲಿ ತಮ್ಮ ತೋಟದಲ್ಲಿ ಅವರು ಈ ಫೋನ್ ಬೂತ್ ಮಾಡಿದರು. ಪ್ರತಿದಿನ ಆ ಫೋನ್ ಬೂತ್ ಬಳಿ ಹೋಗಿ, ತಮ್ಮ ದುಃಖವನ್ನು ಹೇಳಿಕೊಂಡು ಮನಸ್ಸನ್ನು ಹಗುರ ಮಾಡುತ್ತಿದ್ದರು. ಬೇರೆ ಬೇರೆ ನಂಬರ್‌ಗೆ ಡಯಲ್ ಮಾಡಿ ಮನದ ಮಾತುಗಳನ್ನು ಹೇಳುತ್ತಿದ್ದರು. ಇದು ತಮ್ಮ ಸಹೋದರನಿಗೆ ತಲುಪುತ್ತದೆ ಎಂಬ ನಂಬಿಕೆ ಅವರದ್ದಾಗಿತ್ತು.

ಸುನಾಮಿ ನಂತರ ಈ ಫೋನ್ ಬೂತ್ ಸಾರ್ವಜನಿಕರದ್ದಾಯಿತು. ಬೇರೆ ಬೇರೆ ಕಡೆಗಳಿಂದ ಜನರು ಇಲ್ಲಿ ಬಂದು ಫೋನ್ ಮೂಲಕ ಮಾತನಾಡಿ ತಮ್ಮ ಮನದ ಮಾತುಗಳನ್ನು ಆಡುತ್ತಿದ್ದರು. ಈ ಫೋನ್ ಸಾರ್ವಜನಿಕಗೊಂಡ ಮೂರು ವರ್ಷದಲ್ಲಿ ಸುಮಾರು ಹತ್ತು ಸಾವಿರ ಜನ ಇಲ್ಲಿ ಭೇಟಿ ನೀಡಿ ಫೋನಿನಲ್ಲಿ ಮಾತನಾಡಿದ್ದಾರೆ.

ಜಪಾನ್‌ನ ನ್ಯಾಷನಲ್ ಪಬ್ಲಿಕ್ ಬ್ರಾಡ್ ಕಾಸ್ಟಿಂಗ್ ಸೆಂಟರ್ ಇದರ ಮೇಲೆ ‘ಫೋನ್ ಆಫ್ ವಿಂಡ್ – ವಿಷ್ಪರ್ ಟು ಲಾಸ್ಟ್ ಫ್ಯಾಮಿಲಿಸ್’ ಎಂಬ ಡಾಕ್ಯುಮೆಂಟರಿ ಚಿತ್ರ ತಯಾರಿಸಿದೆ. ಜೊತೆಗೆ ಒಂದು ಪುಸ್ತಕವೂ ಸದ್ಯದಲ್ಲೇ ರಿಲೀಸ್ ಆಗಲಿದೆ. ಅಲ್ಲದೆ ನೊಬುಹೀರೋ ಸುವಾ ಎಂಬುವವರು ಚಿತ್ರವನ್ನು ನಿರ್ದೇಶಿಸಿದ್ದು, ಮುಂದಿನ ವರ್ಷ ರಿಲೀಸ್ ಆಗಲಿದೆ.

Leave a Reply

Your email address will not be published. Required fields are marked *