ದೇಶದಲ್ಲಿ ಕೊರೊನಾ ಲಸಿಕೆ ಮೊದಲು ಪಡೆದ ವ್ಯಕ್ತಿ ಯಾರು ?

ಹೊಸದಿಲ್ಲಿ: ಇಂದು ಪ್ರಧಾನಿ ಮೋದಿ ದೇಶದ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದು, ದೇಶದ ಪ್ರಮುಖ ನಗರಗಳಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ಮಧ್ಯೆ ದೇಶದಲ್ಲಿ ಕೊರೊನಾ ಲಸಿಕೆ ಮೊದಲು ಪಡೆದ ವ್ಯಕ್ತಿ ಯಾರು ಎಂಬ ಚರ್ಚೆ ಬಿರುಸಿನಿಂದ ಸಾಗುತ್ತಿದೆ. ಸೇರಂ ಇನ್ಸ್ಟಿಟ್ಯೂಟ್‌ ತಯಾರಿಸಿರುವ ಕೋವಿಶೀಲ್ಡ್‌ ಎಂಬ ಕೊರೊನಾ ಲಸಿಕೆಯ ಮೊದಲ ಡೋಸ್‌ ದಿಲ್ಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನೀಡಲಾಗಿದೆ.

ದಿಲ್ಲಿಯ ಮನೀಶ್‌ ಕುಮಾರ್‌ ಎನ್ನುವ ಪೌರ ಕಾರ್ಮಿಕ ಸಿಬ್ಬಂದಿಗೆ(ಕೊರೊನಾ ವಾರಿಯರ್‌)ಗೆ ಕೊರೊನಾ ಲಸಿಕೆಯ ಮೊದಲ ಡೋಸ್‌ ನೀಡಲಾಗಿದೆ.

ಪ್ರಧಾನಿ ಮೋದಿ ಚಾಲನೆ ನೀಡಿದ ಬಳಿಕ ದೇಶದಲ್ಲಿ ಮೊದಲ ಕೊರೊನಾ ಲಸಿಕೆ ಪಡೆದ ವ್ಯಕ್ತಿಯಾಗಿ ಪೌರ ಕಾರ್ಮಿಕ ಮನೀಷ್‌ ಹೊರಹೊಮ್ಮಿದ್ದಾರೆ. ಇನ್ನು ಲಸಿಕೆಯನ್ನು ಮನೀಶ್‌ ಪಡೆಯುವ ವೇಳೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಹಾಗೂ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಉಪಸ್ಥಿತರಿದ್ದರು.

ನಂತರ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಕೂಡ ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ. ಇನ್ನು ಮಧ್ಯಪ್ರದೇಶದ ಭೋಪಾಲ್‌, ಗುಜರಾತ್‌, ಜಮ್ಮು-ಕಾಶ್ಮೀರ, ಕರ್ನಾಟಕದಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಇಂದು ಮೂರು ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *