ಹಿಂದೂ ಭಾವನೆಗೆ ದಕ್ಕೆಯಾಗುವಂತ ಮಾತಾಡ್ತಾನೆ ಎಂದು ಫಾರೂಖ್ ಬಂಧನ!: ಸೈನಿಕರ ಸಾವನ್ನು ಸಂಭ್ರಮಿಸುವ ಅರ್ನಾಬ್ಗೆ ಏಕೆ ಬಂಧನವಿಲ್ಲ!?
ನ್ಯೂಸ್ ಕನ್ನಡ ವರದಿ: ಈ ಹುಡುಗನನ್ನು ಟೀವಿ, ಯೂಟ್ಯೂಬ್ ಗಳಲ್ಲಿ ನೋಡಿರುತ್ತೀರಿ. ಈತನ ಹೆಸರು ಮುನಾವರ್ ಫಾರೂಖಿ. ಮೂಲತಃ ಗುಜರಾತ್ ನವನು. ಇಂದೋರ್ ನಲ್ಲಿ ಈತನ ಶೋ ಒಂದನ್ನು ಆಯೋಜಿಸಲಾಗಿತ್ತು. ಈತನ ಮೇಲೆ ಹಿಂದೂ ಧಾರ್ಮಿಕ ಭಾವನೆಗಳಿಗೆ ಅಪಚಾರವೆಸಗಿದೆ ಆರೋಪದ ಮೇಲೆ ಕೇಸು ಹೆಟ್ಟಿ, ಜೈಲಿಗಟ್ಟಲಾಗಿದೆ. ಹದಿನೈದು ದಿನಗಳಿಂದ ಈತ ಮತ್ತು ಇನ್ನೂ ಐವರು ಜೈಲಿನಲ್ಲಿದ್ದಾರೆ. ಮಾಜಿಸ್ಟ್ರೇಟ್ ಕೋರ್ಟ್, ಸೆಷನ್ಸ್ ಕೋರ್ಟ್ ಇವನಿಗೆ ಜಾಮೀನು ನಿರಾಕರಿಸಿವೆ, ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದಾಗ ಪೊಲೀಸರು ಕೇಸ್ ಡೈರಿ ಮರೆತು ಬಂದಿದ್ದರಂತೆ, ಹೀಗಾಗಿ ಅಲ್ಲೂ ಜಾಮೀನು ಸಿಕ್ಕಿಲ್ಲ!
ಅಷ್ಟಕ್ಕೂ ಈ ಹುಡುಗ ಎಂಥ ಕಾಮಿಡಿ ಮಾಡಿದ? ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗುವಂಥದ್ದು ಏನು ಮಾತಾಡಿದ ಎಂಬುದು ನಿಮ್ಮ ಪ್ರಶ್ನೆಯಲ್ಲವೇ? ವಿಷಯ ಏನು ಗೊತ್ತಾ? ಇವನು ಏನನ್ನೂ ಮಾತಾಡೇ ಇಲ್ಲ. ಮಾತಾಡಬಹುದು ಎಂಬ ಅನುಮಾನದಲ್ಲಿ ಕೇಸು ಹಾಕಲಾಗಿದೆ! ಇದು ತಮಾಶೆಯಲ್ಲ, ಸತ್ಯ. ಹೈಕೋರ್ಟ್ ನಲ್ಲಿ ಪೊಲೀಸರೇ ಹೇಳಿರುವ ಪ್ರಕಾರ ಮುನವರ್ ಮೇಲಿನ ಆರೋಪಗಳಿಗೆ ಯಾವ ಸಾಕ್ಷಿಯೂ ಇಲ್ಲ! ಸ್ಥಳೀಯ ಎಂಎಲ್ಎ ಮಗನೊಬ್ಬ ದೂರುಕೊಟ್ಟ, ಪೊಲೀಸರು ಕೇಸು ದಾಖಲಿಸಿ ಜೈಲಿಗಟ್ಟಿದರು!
ಆದರೂ ಮುನವರ್ ಜೈಲಿನಲ್ಲಿದ್ದಾನೆ. ಪೊಲೀಸರು ಕೇಸ್ ಡೈರಿ ತರಲಿಲ್ಲವೆಂದು ಹೈಕೋರ್ಟ್ ವಿಚಾರಣೆಯನ್ನು ಮುಂದಕ್ಕೆ ಹಾಕುತ್ತದೆ! ಹತ್ತಿರದಲ್ಲೇ ಠಾಣೆ ಇದೆ, ತರಿಸಿ ಎಂದು ಮುನವರ್ ಪರ ವಕೀಲರು ಬೇಡಿಕೊಳ್ಳುತ್ತಾರೆ. ಅದೆಲ್ಲ ಆಗಲ್ಲ, ಮುಂದಿನ ಡೇಟಿಗೆ ವಿಚಾರಣೆ ಮಾಡೋಣ ಎನ್ನುತ್ತಾರೆ ಜಡ್ಜು! ಹೋಗಲಿ ಮುನವರ್ ಏನೋ ಮಾತಾಡಬಹುದು ಎಂಬ ಕಾರಣಕ್ಕೆ ಈ ಕೇಸಲ್ಲವೇ? ಆ ಈವೆಂಟ್ ಸಂಘಟಿಸಿದ್ದ ಹುಡುಗ, ಪ್ರೇಕ್ಷಕನಾಗಿದ್ದ ಮತ್ತೊಬ್ಬ, ಮುನವರ್ ನ ಸಹಾಯಕ.. ಹೀಗೆ ಇದೆಲ್ಲದಕ್ಕೂ ಯಾವ ಸಂಬಂಧವೂ ಇಲ್ಲದ ಇನ್ನೂ ಐವರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ!
ಈ ಕಡೆ ಅರ್ನಾಬ್ ಗೋಸ್ವಾಮಿ ಮಿನಿಸ್ಟರ್ ಗಳನ್ನು ಹ್ಯಾಂಡಲ್ ಮಾಡುವ, ಜಡ್ಜ್ ಗಳನ್ನು ಬುಕ್ ಮಾಡುವ ಮಾತುಗಳನ್ನು ಆಡುತ್ತಾನೆ. ಮಿಲಿಟರಿ ರಹಸ್ಯಗಳನ್ನು ಹಂಚಿಕೊಳ್ಳುತ್ತಾನೆ. ನಮ್ಮ ವೀರಯೋಧರ ಸಾವನ್ನು ಹುರ್ರೇ ಎಂದು ಸಂಭ್ರಮಿಸುತ್ತಾನೆ. ಅವನ ಕೂದಲೂ ಸಹ ಕೊಂಕುವುದಿಲ್ಲ. ಅವನ ರಕ್ಷಣೆಗೆ ಪರ್ಸನಲ್ ಲಿಬರ್ಟಿ ಹೆಸರಲ್ಲಿ ನ್ಯಾಯಾಲಯಗಳೇ ಬಂದು ನಿಲ್ಲುತ್ತವೆ!.
‘ಆರ್ಭಟ’ ಗೋಸ್ವಾಮಿಯ ಲೀಕ್ ಗಳು
ರಿಪಬ್ಲಿಕ್ ಚಾನೆಲ್ ನ ಟಿಆರ್ ಪಿಯನ್ನು ಅಕ್ರಮಮಾರ್ಗದಿಂದ ಹೆಚ್ಚಿಸಲು ಸಂಪಾದಕ ಅರ್ನಬ್ ಗೋಸ್ವಾಮಿ ಪ್ರಯತ್ನಿಸಿದ್ದಾರೆ ಎಂಬ ಆರೋಪವನ್ನು ಸಮರ್ಥಿಸುವಂತಹ ಸುಮಾರು 500 ಪುಟಗಳ ವಾಟ್ಸ್ ಪ್ ಮಾತುಕತೆ ಸೋರಿಕೆಯಾಗಿದೆ. ಇದು ಬಾರ್ಕ್ (Broadcast Research Council) ನ ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತಾ ಮತ್ತು ಅರ್ನಬ್ ಜೊತೆಗೆ ವಾಟ್ಸಪ್ ನಲ್ಲಿ ನಡೆದಿದ್ದ ಮಾತುಕತೆ.
ಟಿಆರ್ ಪಿ ಹಗರಣದ ಬಗ್ಗೆ ಈಗಾಗಲೇ ಮುಂಬೈ ಪೊಲೀಸರು ಅರ್ನಬ್ ಗೋಸ್ವಾಮಿ ವಿರುದ್ದ ಬಾಂಬೇ ಹೈಕೋರ್ಟ್ ನಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದು, ಪೂರಕ ಆರೋಪ ಪಟ್ಟಿಯಲ್ಲಿ ಈ ವಾಟ್ಸ್ ಪ್ ಮಾತುಕತೆಯ ವಿವರವನ್ನು ಸೇರಿಸಲಾಗಿದೆ ಎಂದು ಹೇಳಲಾಗಿದೆ.
ಅರ್ನಬ್ ಗೋಸ್ವಾಮಿ ಕೇವಲ ಬಾರ್ಕ್ ಸಿಇಒ ಜೊತೆ ಮಾತ್ರ ಅಲ್ಲ, ಪ್ರಧಾನಮಂತ್ರಿ ನರೇಂದ್ರಮೋದಿ ಕಚೇರಿ ಮತ್ತು ಬಿಜೆಪಿಯ ಪ್ರಮುಖ ನಾಯಕರ ಜೊತೆ ಕೂಡಾ ಆತ್ಮೀಯ ಸಂಬಂಧ ಹೊಂದಿರುವುದು ಮಾತ್ರವಲ್ಲ ಅಕ್ರಮ ಟಿಆರ್ ಪಿ ಬಗ್ಗೆ ಮಾತುಕತೆ ನಡೆಸಿದ್ದ ಎನ್ನುವುದು ಈ ವಾಟ್ಸಪ್ ಚಾಟ್ ನಲ್ಲಿ ಬಹಿರಂಗಗೊಂಡಿದೆ.
ಬಾರ್ಕ್ ಸಿಇಒ ದಾಸ್ ಗುಪ್ತಾ, ಅರ್ನಬ್ ಗೋಸ್ವಾಮಿ ಜೊತೆ ಎಷ್ಟೊಂದು ಗಾಢ ಸಂಬಂಧ ಹೊಂದಿದ್ದನೆಂದರೆ ಬಾರ್ಕ್ ನ ರಹಸ್ಯ ಪತ್ರವನ್ನು ಕೂಡಾ ಆತ ಅರ್ನಬ್ ಗೆ ಕಳಿಸಿದ್ದನಂತೆ. ನ್ಯೂಸ್ ಬ್ರಾಡ್ ಕಾಸ್ಟ್ ಅಸೋಸಿಯೇಷನ್ ಬಾರ್ಕ್ ಗೆ ಬರೆದಿರುವ ಪತ್ರವನ್ನು ತಾನು ತಡೆಹಿಡಿದಿದ್ದು ದಾಸ್ ಗುಪ್ತಾ ಹೇಳಿದರೆ, ಅದಕ್ಕೆ ಪ್ರತಿಕ್ರಿಯಿಸುತ್ತಾ ‘ ಈ ಸಂಬಂಧ ನಾನು ಪ್ರಧಾನಮಂತ್ರಿ ಜೊತೆ ಮಾತನಾಡುತ್ತೇನೆ’’ ಎಂದು ಹೇಳಿದ್ದಾನೆ.
ನ್ಯೂಸ್ ಚಾನೆಲ್ ಗಳ ಟಿಆರ್ ಪಿಯನ್ನು ಅಳೆಯುವ ಸೆಟ್ ಅಪ್ ಬಾಕ್ಸ್ ಗಳಿಗೆ ವಿಶೇಷ ಸಾಪ್ಟ್ ವೇರ್ ಅಳವಡಿಸುವ ಮೂಲಕ ಈ ಪ್ರಕ್ರಿಯೆಯನ್ನು ಡಿಜಿಟಲೀಕರಣ ಗೊಳಿಸುವ TRAI ಪ್ರಸ್ತಾಪ ರಿಪಬ್ಲಿಕ್ ಚಾನೆಲ್ ಗೆ ಮಾತ್ರವಲ್ಲ, ಬಿಜೆಪಿಗೆ ಕೂಡಾ ಹಾನಿ ಮಾಡಬಲ್ಲದು. ಬಿಜೆಪಿ ನಾಯಕರ ಪ್ರಭಾವವನ್ನು ಬಳಸಿ ಈ ಸುಧಾರಣೆಯನ್ನು ತಡೆಹಿಡಿಯುವಂತೆ ಬಾರ್ಕ್ ಸಿಇಒ ಪಾರ್ಥೋ ದಾಸ್ ಗುಪ್ತಾ ಅರ್ನಬ್ ಗೋಸ್ವಾಮಿಗೆ ತಿಳಿಸಿದ್ದಾನೆ,.
ಇದೇ ವೇಳೆ ಟಿಆರ್ ಪಿ ಹಗರಣದ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಜನವರಿ 29ಕ್ಕೆ ಮುಂದೂಡಿದೆ. ಸದ್ಯಕ್ಕೆ ಅರ್ನಬ್ ಗೋಸ್ವಾಮಿಯನ್ನು ಬಂಧಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅದರ ಒಂದಷ್ಟು ಟ್ವೀಟ್ಗಳು ಇಲ್ಲಿವೆ.