ಕಾಮನ್ ವೆಲ್ತ್ ಮೈದಾನದಲ್ಲಿಯೇ ಗೆಳತಿಗೆ ಪ್ರಪೋಸ್ ಮಾಡಿದ ಬಾಸ್ಕೆಟ್ ಬಾಲ್ ಆಟಗಾರ!

ನ್ಯೂಸ್ ಕನ್ನಡ ವರದಿ(09-04-2018): ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ಮೈದಾನದಲ್ಲೇ ಇಂಗ್ಲೆಂಡ್ ಬಾಸ್ಕೆಟ್ ಬಾಲ್ ತಂಡದ ಆಟಗಾರ ಜಮೆಲ್ ಆ್ಯಂಡರ್ಸನ್ ಅವರು ತನ್ನ ಗೆಳತಿ ತನ್ನದೇ ದೇಶದ ಮಹಿಳಾ ಬಾಸ್ಕೆಟ್ ಬಾಲ್ ಆಟಗಾರ್ತಿ ಜಾರ್ಜಿಯಾ ಜೋನ್ಸ್ ಗೆ ಪ್ರೇಮ ನಿವೇಧನೆಯನ್ನು ಮಾಡಿ ಉಂಗುರ ತೊಡಿಸಿದ ಘಟನೆ ವರದಿಯಾಗಿದೆ.

ಜಮೇಲ್ ಆ್ಯಂಡರ್ಸನ್ ತನ್ನ ಬಹುಕಾಲದ ಗೆಳತಿ ಜಾರ್ಜಿಯಾ ಜೋನ್ಸ್ ಗೆ ಸಹ ಆಟಗಾರರ ಸಮ್ಮುಖದಲ್ಲೇ ಪ್ರೇಮ ನಿವೇಧನೆಯನ್ನು ಮಾಡಿದರು. ಹಠಾತ್ತನೆ ನಡೆದ ಈ ಘಟನೆಯಿಂದ ವಿಚಲಿತರಾದ ಜಾರ್ಜಿಯಾ ಜೋನ್ಸ್, ಕೆಲ ಕ್ಷಣ ಮೌನಕ್ಕೆ ಶರಣಾದರು. ನಂತರ ತನ್ನ ಪ್ರೇಮಿಯ ನಿವೇಧನೆಯನ್ನು ಒಪ್ಪಿಕೊಂಡ ಜಾರ್ಜಿಯಾ ಜೋನ್ಸ್ ಅವರನ್ನು ಅಪ್ಪಿಕೊಂಡರು.

ತನ್ನ ಪ್ರೇಮ ನಿವೇಧನೆಯನ್ನು ಒಪ್ಪಿಕೊಂಡ ನಂತರ ಆ್ಯಂಡರ್ಸನ್ ತನ್ನ ಗೆಳತಿಗೆ ಮದುವೆ ನಿಶ್ಚಿತಾರ್ಥದ ಉಂಗುರವನ್ನು ತೊಡಿಸಿದರು. ಇವರ ಮದುವೆಯು ಕೆಲವೇ ದಿನಗಳಲ್ಲಿ ನೆರವೇರಲಿದೆ ಎಂದು ತಿಳಿದು ಬಂದಿದೆ.

https://www.youtube.com/watch?v=jII7uGazJMc

Leave a Reply

Your email address will not be published. Required fields are marked *