ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾಗೆ 5 ಕೋಟಿ ರೂ. ಬಹುಮಾನ ಘೋಷಣೆ ! ಮೋದಿ ಶ್ಲಾಘನೆ…

ಬ್ರಿಸ್ಬೇನ್: ಆಸ್ಟ್ರೇಲಿಯಾದ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದ ಜಯದ ಮೂಲಕ ಟೆಸ್ಟ್ ಸರಣಿಯನ್ನು ಗೆದ್ದ ಟೀಂ ಇಂಡಿಯಾಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ-ಬಿಸಿಸಿಐ 5 ಕೋಟಿ ರೂಗಳ ನಗದು ಬಹುಮಾನ ಘೋಷಣೆ ಮಾಡಿದೆ.

ಇದೇ ವೇಳೆ ಭಾರತ ತಂಡಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ಪಂದ್ಯದುದ್ದಕ್ಕೂ ಭಾರತೀಯ ಆಟಗಾರರು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಈ ಸರಣಿಯಲ್ಲಿ ಭಾರತ ತಂಡದ ಆಟಗಾರರು ತೋರಿದ ಉತ್ಸಾಹ ಮತ್ತು ಗೆಲುವಿನೆಡೆಗೆ ಸಾಗಿದ ಪರಿ ನಿಜಕ್ಕೂ ಅಭಿನಂದನೀಯ ಎಂದು ಬಣ್ಣಿಸಿರುವ ಮೋದಿ, ಟ್ವೀಟ್​ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ.

ಈ ಕುರಿತಂತೆ ಸ್ವತಃ ಬಿಸಿಸಿಐ ಟ್ವೀಟ್ ಮಾಡಿದ್ದು, ಗಬ್ಬಾ ಟೆಸ್ಟ್ ನ ಜಯದಿಂದ ಸಂತಸಗೊಂಡಿರುವ ಬಿಸಿಸಿಐ, ಈ ಸರಣಿ ಜಯ ಭಾರತೀಯ ಕ್ರಿಕೆ್ಟ್ ನ ಇತಿಹಾಸದಲ್ಲಿ ಸುದೀರ್ಘ ಕಾಲದವರೆಗೂ ನೆನಪಿನಲ್ಲಿರುತ್ತದೆ ಎಂದು ಹೇಳಿದೆ. ಅಂತೆಯೇ ಟೀಂ ಇಂಡಿಯಾದ ಆಟಗಾರರು ಮತ್ತು ತಂಡದ ಕೋಚಿಂಗ್ ಮತ್ತು ಇತರೆ ಸಿಬ್ಬಂದಿಗಳಿಗೆ 5 ಕೋಟಿ ರೂ ನಗದು ಘೋಷಣೆ ಮಾಡಿದೆ.

ಅಂತೆಯೇ ಟೀಂ ಇಂಡಿಯಾದ ಐತಿಹಾಸಿಕ ಜಯಕ್ಕೆ ಮಾಜಿ ಮತ್ತು ಹಾಲಿ ಆಟಗಾರರು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.

Leave a Reply

Your email address will not be published. Required fields are marked *